ಕಾಂಗ್ರೆಸ್ ಜನವಿರೋಧಿ ನೀತಿಗಳ ವಿರುದ್ಧ ಬೃಹತ್ ರ್ಯಾಲಿ!
ಕಾಂಗ್ರೆಸ್ ವಿರುದ್ಧ ಮೈಸೂರಿನಲ್ಲಿ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿ ‘ ಕಾಂಗ್ರೆಸ್ ಜನವಿರೋಧಿ ನೀತಿಗಳ ವಿರುದ್ಧ ಬೃಹತ್ ರ್ಯಾಲಿ ನಡೆಸಿದೆ. ಮೈಸೂರಿನ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಹೇಮಂತ್ ಕುಮಾರ್ ಗೌಡ, ಮಹೇಶ್, ರಘು, ಶಿವಕುಮಾರ್ ಸೇರಿ ಹಲವರು ಉಪಸ್ಥಿತರಿದ್ದರು. ಇದೇವೇಳೆ ಮಾತನಾಡಿದ ಹೇಮಂತ್ ಕುಮಾರ್ ಗೌಡ, ಹಿಂದೂಗಳ ವಿರೋಧಿ ಕಾಂಗ್ರೆಸ್ ಪಕ್ಷದ ವಿರುದ್ಧ ನಾವು ತಿಳಿದುಕೊಳ್ಳುವ ಕಾಲ ಬಂದಿದೆ. ಕಳೆದ ವಾರ ಶಿವಮೊಗ್ಗದಲ್ಲಿ ನಡೆದ ಹಿಂದೂ ಕಾರ್ಯಕರ್ತ ಹರ್ಷ ಅವರ ಕೊಲೆ ನಿಜಕ್ಕು ಹಿಂದೂ ಸಮಾಜವನ್ನ ಕುಗ್ಗಿಸುವ ಕೆಲಸ ಆಗಿದೆ. ಇದು ನಮ್ಮ ಮಕ್ಕಳ ಬಗ್ಗೆಯು ಚಿಂತಿಸುವಂತಾಗಿದೆ. ಕೇವಲ ಇಂದು ಹರ್ಷ ಮಾತ್ರ ಹುತಾತ್ಮ ಆಗಿಲ್ಲ, ಈ ಪ್ರಕರಣ ಷಡ್ಯಂತ್ರವಾಗಿದೆ. ಹಿಂದೂಗಳ ವಿರುದ್ಧದ ಷಡ್ಯಂತ್ರವಾಗಿದ್ದು, ಇದರ ಹಿಂದೆ ಕಾಂಗ್ರೆಸ್ ಇದೆ. ಇದರ ವಿರುದ್ಧ ನಾವು ಈ ಹೋರಾಟ ಶುರು ಮಾಡಿದ್ದೇವೆ. ಹಿಜಾಬ್ ಕಾರಣ ಇಟ್ಟುಕೊಂಡು ಅದಕ್ಕೆ ಬೆಂಬಲ ಕೊಡುವುದರ ಮೂಲಕ ಹರ್ಷನ ಹತ್ಯೆಯಾಗಿದೆ. ಆದರೆ ಹರ್ಷ ಹತ್ಯೆಯಾದ 24 ಗಂಟೆಯೊಳಗೆ ಆ ಆರೋಪಿಗಳನ್ನ ನಮ್ಮ ಸರ್ಕಾರ, ಬೊಮ್ಮಾಯಿ ಅವರ ನೇತೃತ್ವದ ಸರ್ಕಾರ ಅವರುಗಳನ್ನ ಬಂಧಿಸಿದೆ. ಇದಕ್ಕಾಗಿ ನಾನು ಮುಖ್ಯಮಂತ್ರಿ ಬೊಮ್ಮಾಯಿ ಅವರನ್ನ ಅಭಿನಂದಿಸುತ್ತೇನೆ ಎಂದರು.