ಲಂಚ ಕೇಳಿ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ ಖದೀಮರು!
ಎಸಿಬಿ ಬಲೆಗೆ ಇಬ್ಬರು ಭ್ರಷ್ಟರು!
ಚಾಮರಾಜನಗರ : ಕಾಮಗಾರಿ ಬಿಲ್ ಮಾಡಿಕೊಡಲು ಒಂದು ಲಕ್ಷ ರೂಪಾಯಿಗಳನ್ನು ಲಂಚ ಕೇಳಿದ ಆರೋಪದ ಮೇರೆಗೆ ಇಬ್ಬರನ್ನು ಚಾಮರಾಜನಗರ ಡಿವೈಎಸ್ಪಿ ಎಸಿಬಿ ತಂಡ ಬಂಧಿಸಿದೆ.
ಚಾಮರಾಜನಗರ ಸಣ್ಣ ನೀರಾವರಿ ಇಲಾಖೆಯಲ್ಲಿ ಎಇಇಯಾಗಿ ಕಾರ್ಯನಿರ್ವಹಿಸುತ್ತಿರುವ ಶ್ಯಾಮ್ ಸುಂದರ್, ಎಇ ರಾಜಶೇಖರ್ ಎಸಿಬಿ ಬಲೆಗೆ ಸಿಕ್ಕಿಬಿದ್ದವರಾಗಿದ್ದಾರೆ. ಮೂರುವರೆ ಲಕ್ಷ ರೂಪಾಯಿಗಳ ಕಾಮಗಾರಿ ಬಿಲ್ ಮಾಡಿಕೊಡಲು ಒಂದು ಲಕ್ಷ ರೂಗಳನ್ನು ಲಂಚವಾಗಿ ನೀಡುವಂತೆ ಪೀಡಿಸಿದರು. ದೂರುದಾರ ಹಣವನ್ನು ತರಲು ಮೈಸೂರಿಗೆ ಹೇಳಿದ್ದು, ಹಣವನ್ನು ತೆಗೆದುಕೊಂಡು ಮೈಸೂರಿಗೆ ಹೋದರು.
ಮೈಸೂರು ಜಿಲ್ಲೆಯ ಸಿದಾರ್ಥ ನಗರದ ಕಮಾನು ಗೇಟು ಮುಂಭಾಗ ದೂರುದಾರರಿಂದ ಒಂದು ಲಕ್ಷ ರೂ ಸ್ವೀಕರಿಸಿತ್ತಿದ್ದ ಸಂದರ್ಭ ಚಾಮರಾಜನಗರ ಡಿವೈಎಸ್ಪಿ ಸದಾನಂದ ತಿಪ್ಪಣ್ಣವರ್ ಹಾಗೂ ಅವರ ತಂಡದ ಕೈಗೆ ಸಿಕ್ಕಿಬಿದ್ದಿದ್ದಾರೆ.