ಖಾಸಗಿ ಕಂಪನಿ ಔಷಧಿ ಬರೆಯುವ ಸರ್ಕಾರಿ ವೈದ್ಯರ ವಿರುದ್ಧ ಕ್ರಮ: ಸಚಿವ ಡಾ ಸುಧಾಕರ್..

ಮೈಸೂರು:

“ಸರ್ಕಾರಿ ವೈದ್ಯರು ಖಾಸಗಿ ಕಂಪನಿ ಹೆಸರಿನ ಔಷಧಿ ಬರೆದರೆ ಕ್ರಮ ಕೈಗೊಳ್ಳಲಾಗುವುದು.” ಮೈಸೂರಿನ ಆರೋಗ್ಯ ಸಚಿವ ಡಾ ಸುಧಾಕರ್ ಎಚ್ಚರಿಸಿದ್ದಾರೆ.

ಇಂದು ಮೈಸೂರಿನಲ್ಲಿ ಮಾತನಾಡಿದ ಸಚಿವ ಡಾ ಸುಧಾಕರ್ “ಜನೌಷಧ ಎಲ್ಲಾ ರೀತಿಯಲ್ಲೂ ಪರಿಣಾಮಕಾರಿಯಾಗಿದೆ. ಜೊತೆಗೆ ಅತ್ಯಂತ ಕಡಿಮೆ ದರದಲ್ಲಿ ಸಿಗುತ್ತಿದೆ. ಕೆಲವರು ಮಾತ್ರ ಇದನ್ನ ಬಳಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಪ್ರತಿ ಗ್ರಾಮ ಮಟ್ಟಕ್ಕೆ ಜನೌಷಧವನ್ನ ತೆಗೆದುಕೊಂಡು ಹೋಗಲಾಗವುದು. ಪ್ರತಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲೂ ಜನೌಷಧ ಲಭ್ಯವಿರುವಂತೆ ನೋಡಿಕೊಳ್ಳಲಾಗುವುದು.” ಎಂದರು

“ಜನೌಷಧ ಬಳಕೆಯಲ್ಲಿ ಕರ್ನಾಟಕ ದೇಶದಲ್ಲಿ ಮೂರನೆ ಸ್ಥಾನದಲ್ಲಿ ಇದೆ. ಮುಂದೆ ಮೊದಲ ಸ್ಥಾನಪಡೆಯವಲ್ಲು ಇನ್ನೂ ಹೆಚ್ಚಿನ ಕೇಂದ್ರ ತೆರಯಲಾಗುವುದು. ಕೆಲವರು ಧರಿಸಲು ಬ್ರಾಂಡೆಡ್ ಬಟ್ಟೆಯೇ ಬೇಕು ಅಂತಾರೆ, ಅಂತಹವರು ಬೇರೆ ಬ್ರಾಂಡ್ ಔಷಧಿ ಖರೀದಿ ಮಾಡುತ್ತಿದ್ದಾರೆ.” ಎಂದು ಹೇಳಿದ್ದಾರೆ.

About Author

Leave a Reply

Your email address will not be published. Required fields are marked *