ಯಾವುದೇ ಕ್ಷೇತ್ರದಿಂದ ನಿಂತರು ಗೆಲ್ಲುವ ಸಾಮರ್ಥ್ಯ ಸಿದ್ದರಾಮಯ್ಯನವರಿಗೆ ಇದೆ: ಯತೀಂದ್ರ ಸಿದ್ದರಾಮಯ್ಯ
ತಿ.ನರಸೀಪುರ: ಹುಣಸೂರಿಗೆ ಸಿದ್ದರಾಮಯ್ಯರನ್ನ ಹೆಚ್ ವಿಶ್ವನಾಥ್ ಆಹ್ವಾನ ನೀಡಿದ ಹಿನ್ನಲೆ ಶಾಸಕ ಯತೀಂದ್ರ ಸಿದ್ದರಾಮಯ್ಯ ವಿಶ್ವನಾಥ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದು ಯಾವುದೇ ಕ್ಷೇತ್ರದಿಂದ ನಿಂತರು ಗೆಲ್ಲುವ ಸಾಮರ್ಥ್ಯ ಸಿದ್ದರಾಮಯ್ಯನವರಿಗೆ ಇದೆ ಎಂದು ತಿಳಿಸಿದ್ದಾರೆ.
ತಿ.ನರಸೀಪುರದಲ್ಲಿ ಯತೀಂದ್ರ ಸಿದ್ದರಾಮಯ್ಯ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ ಹೆಚ್ ವಿಶ್ವನಾಥ್ ರವರು ಸಿದ್ದರಾಮಯ್ಯರನ್ನ ಹುಣಸೂರಿಗೆ ಯಾಕೆ ಆಹ್ವಾನ ನೀಡಿದ್ದಾರೆ ಅಂತ ಗೊತ್ತಿಲ್ಲ. ಅಂತಿಮವಾಗಿ ಯಾವ ಕ್ಷೇತ್ರದಲ್ಲಿ ನಿಲ್ಲಬೇಕೆಂದು ತೀರ್ಮಾನ ಮಾಡಬೇಕಿರುವುದು ಸಿದ್ದರಾಮಯ್ಯನವರು.
ಸಿದ್ದರಾಮಯ್ಯನವರಿಗೆ ರಾಜ್ಯದ ಹಲವಾರು ಕ್ಷೇತ್ರಗಳಿಂದ ಆಹ್ವಾನ ಬಂದಿದೆ. ಜೊತೆಗೆ ಯಾವುದೇ ಕ್ಷೇತ್ರದಿಂದ ನಿಂತರು ಚುನಾವಣೆ ಗೆಲ್ಲುವ ಸಾಮರ್ಥ್ಯ ಸಿದ್ದರಾಮಯ್ಯನವರಿಗೆ ಇದೆ. ಆಗಾಗಿ ಇತರೆ ಪಕ್ಷದ ನಾಯಕರ ಬೆಂಬಲ ಬೇಕಾಗಿಲ್ಲ ಎಂದರು.
ಇನ್ನು ಹುಣಸೂರು ಕ್ಷೇತ್ರದಲ್ಲಿ ಜೆಡಿಎಸ್ ಆಕ್ಟಿವ್ ಹಿನ್ನಲೆ. ಚುನಾವಣೆ ಸಮೀಪಿಸುತ್ತಿದೆ ಎಲ್ಲಾ ಪಕ್ಷಗಳು ತಯಾರಿ ನಡೆಸುತ್ತಿವೆ. ಅದೇ ರೀತಿ ನಾವು ಪೂರ್ವಸಿದ್ಧತೆ ನಡೆಸುತ್ತೇವೆ. ಕಾಂಗ್ರೆಸ್ ಕಾರ್ಯಕರ್ತರು ಸದೃಢರಾಗಿದ್ದಾರೆ ಅಂತ ಶಾಸಕ ಯತೀಂದ್ರ ಸಿದ್ದರಾಮಯ್ಯ ತಿಳಿಸಿದ್ದಾರೆ.