ಕಬಿನಿ ಡ್ಯಾಂ ಭರ್ತಿ- ನಂಜನಗೂಡಲ್ಲಿ ಹೈ ಅಲರ್ಟ್!
ಕಬಿನಿ ಜಲಾಶಯ ಭರ್ತಿ… ಪ್ರವಾಹ ಭೀತಿ…ನಂಜನಗೂಡಿನ ಕಪಿಲಾ ನದಿಯ ಸುತ್ತಮುತ್ತ ಹೈಅಲರ್ಟ್
ನಂಜನಗೂಡು :ಕಬಿನಿಯ ಜಲಾಶಯದಿಂದ ಯಾವುದೇ ಸಮಯದಲ್ಲಾದರೂ ಹೊರಹರಿವಿನ ಪ್ರಮಾಣ ಹೆಚ್ಚಾಗಲಿದ್ದು ನದಿಪಾತ್ರದಲ್ಲಿ ಪ್ರವಾಹ ಭೀತಿ ಇದೆ.ಕಬಿನಿ ಜಲಾಶಯ ಭರ್ತಿಗೆ 2 ಅಡಿ ಮಾತ್ರ ಬಾಕಿ ಇದೆ.
ಕೇರಳದ ವೈಯನಾಡಿನಲ್ಲಿ ಭಾರೀ ಮಳೆ ಹಿನ್ನಲೆ ಕಬಿನಿ ಜಲಾಶಯ ಬಹುತೇಕ ಭರ್ತಿಯಾಗಿದೆ.

ಜಲಾಶಯದ ಗರಿಷ್ಠ ಮಟ್ಟ 2,284 ಅಡಿ
ಇಂದಿನ ಮಟ್ಟ 2,283.5 ಅಡಿ ಇದೆ.
ಒಳ ಹರಿವು 22 ಸಾ ಕ್ಯೂಸೆಕ್ಸ್.
ಹೊರ ಹರಿವು 25 ಸಾವಿರ ಕ್ಯೂಸೆಕ್ಸ್ ಇದ್ದು ಹೊರ ಹರಿವಿನ ಪ್ರಮಾಣ ಹೆಚ್ಚಳವಾಗಿ ಕಪಿಲಾ ನದಿ ಮೈದುಂಬಿ ಹರಿಯುತ್ತಿದೆ ನೀರಿನ ಪ್ರಮಾಣ ಹೆಚ್ಚಾಗುತ್ತಿರುವ ದೆಸೆಯಿಂದ ನದಿ ಪಾತ್ರದ ತಗ್ಗು ಪ್ರದೇಶದ ಜನತೆಗೆ ಈಗಾಗಲೇ ಮುನ್ನೆಚ್ಚರಿಕೆ ಕ್ರಮ ನೀಡಲಾಗಿದೆ.