ನಿರಂತರ ಮಳೆಗೆ ಕುಸಿದ ಮನೆ!
1 min read
ನಂಜನಗೂಡು : ಕಳೆದ ಹತ್ತಾರು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ವಾಸದ ಮನೆಯೊಂದು ಕುಸಿದು ಬಿದ್ದಿರುವ ಘಟನೆ ನಂಜನಗೂಡು ಸಮೀಪದ ಮೊತ್ತ ಗ್ರಾಮದಲ್ಲಿ ಜರುಗಿದೆ. ನಂಜನಗೂಡು ತಾಲೂಕಿನ ಮೊತ್ತ ಗ್ರಾಮದ ಬಸವಣ್ಣ ಎಂಬುವರಿಗೆ ಸೇರಿದ ಮನೆಯೇ ಮಳೆಯ ಅವಾಂತರಕ್ಕೆ ಸಿಲುಕಿ ನೆಲಕಚ್ಚಿದೆ. ಮಳೆಯಿಂದಾಗಿ ಇಂದು ಬೆಳಿಗ್ಗೆ ಮೇಲ್ಚಾವಣಿ ಸಮೇತ ಗೋಡೆಗಳು ಕುಸಿದು ಬಿದ್ದಿವೆ ಅದೃಷ್ಟ ವಸಾಥ್ ಯಾರಿಗೂ ಪ್ರಾಣಾಪಾಯವಾಗಿಲ್ಲ ಗೋಡೆ ಕುಸಿದು ಬಿದ್ದ ಪರಿಣಾಮ ಮನೆಯಲ್ಲಿದ್ದ ಪಾತ್ರೆ ಪಗಡ ಸೇರಿದಂತೆ ಮತ್ತಿತರ ವಸ್ತುಗಳು ನಾಶವಾಗಿವೆ. ಮಳೆಯಿಂದಾಗಿ ಮನೆ ಕಳೆದುಕೊಂಡ ಸಂತ್ರಸ್ತ ಮನೆಯ ಮಾಲೀಕರು ಮಾತನಾಡಿ ನಾವು ಬಡವರಾಗಿದ್ದು ಕೂಲಿ ನಾಲಿ ಮಾಡಿ ಜೀವನ ಸಾಗಿಸುತ್ತಿದ್ದೇವೆ ಈಗ ನಮಗೆ ವಾಸ ಮಾಡುವುದಕ್ಕೂ ಮನೆ ಇಲ್ಲ ಹಾಗಾಗಿ ಸರ್ಕಾರ ಕೂಡಲೇ ನಮಗೆ ಒಂದು ಸೂರು ಕಲ್ಪಿಸಿ ಕೊಡುವಂತೆ ಮನವಿ ಮಾಡಿಕೊಂಡಿದ್ದಾರೆ