ಕೋವಿಡ್: ದೇಶದಲ್ಲಿ ಒಂದೇ ದಿನ 1,68,063 ಹೊಸ ಪ್ರಕರಣ ಪತ್ತೆ; 277 ಮಂದಿ ಬಲಿ
1 min read
ನವದೆಹಲಿ,ಜ.11- ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ ಕೋವಿಡ್ ನ 1,68,063 ಹೊಸ ಪ್ರಕರಣಗಳು ದಾಖಲಾಗಿವೆ. ಇದರಿಂದ ದೇಶದಲ್ಲಿ ಒಟ್ಟಾರೆ ಸೋಂಕಿನ ಪ್ರಮಾಣ 3,58,75,790 ಕ್ಕೆ ತಲುಪಿದೆ.
ಇನ್ನು ಮಹಾಮಾರಿ ಕೊರೊನಾ ಸೋಂಕಿಗೆ ಒಂದೇ ದಿನ 277 ಮಂದಿ ಸಾವನ್ನಪ್ಪಿದ್ದಾರೆ. ಇದರಿಂದ ಸಾವಿನ ಸಂಖ್ಯೆ 4,84,213 ಕ್ಕೆ ಏರಿಕೆಯಾಗಿದೆ.
ಮಹಾರಾಷ್ಟ್ರದಲ್ಲಿ 33,470 ಪ್ರಕರಣಗಳು ದಾಖಲಾಗಿದ್ದರೆ, ಪಶ್ಚಿಮ ಬಂಗಾಳದಲ್ಲಿ 19,286 ಪ್ರಕರಣಗಳು, ದೆಹಲಿಯಲ್ಲಿ 19,166 ಪ್ರಕರಣಗಳು, ತಮಿಳುನಾಡು 13,990 ಪ್ರಕರಣಗಳು ಮತ್ತು ಕರ್ನಾಟಕದಲ್ಲಿ 11,698 ಪ್ರಕರಣಗಳು ದಾಖಲಾಗಿವೆ.
ಸೋಂಕು ದಾಖಲೆ ಹಿಂದಿನ ದಿನಕ್ಕಿಂತ ಶೇ.6.5 ಕಡಿಮೆಯಾಗಿದೆ. ಓಮಿಕ್ರಾನ್ ಸೋಂಕುಗಳ ಉಲ್ಬಣದಿಂದ ಸುಮಾರು 1.8 ಲಕ್ಷ ಕೋವಿಡ್ ಪ್ರಕರಣಗಳನ್ನು ಭಾರತ ಸೋಮವಾರ ವರದಿ ಮಾಡಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿಅಂಶಗಳು ತಿಳಿಸಿವೆ.
ಇನ್ನು ಇಂದಿನಿಂದ ಎಲ್ಲಾ ಅಂತಾರಾಷ್ಟ್ರೀಯ ಆಗಮನಕ್ಕೆ ಕೇಂದ್ರವು ಈಗ ಏಳು ದಿನಗಳ ಕ್ವಾರಂಟೈನ್ ಅನ್ನು ಕಡ್ಡಾಯಗೊಳಿಸಿದೆ.