ದಾವಣಗೆರೆ ಬೈ ಎಲೆಕ್ಷನ್ – ಯಾರಿಗೆ ಸಿಗಲಿದೆ ದಾವಣಗೆರೆಯ ಬೆಣ್ಣೆ ದೋಸೆ.!

ದಾವಣಗೆರೆ : ಬೆಣ್ಣೆ ನಗರಿಯಲ್ಲಿ ದಕ್ಷಿಣ ಕ್ಷೇತ್ರದ ಉಪಚುನಾವಣೆ ಮತದಾನಕ್ಕೆ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದ್ದು 284 ಬೂತ್ ಗಳಲ್ಲಿ ಮತದಾನ ನಡೆಯಲಿದೆ. ಇದಕ್ಕಾಗಿ ಈಗಾಗಲೇ ಬಿಗಿ ಭದ್ರತೆ ಕೈಗೊಳ್ಳಲಾಗಿದ್ದು, ಈಗಾಗಲೇ ಮತಗಟ್ಟೆ ಅಧಿಕಾರಿಗಳು ಮತಪೆಟ್ಟಿಗೆಯೊಂದಿಗೆ ಮತಗಟ್ಟೆಗಳಿಗೆ ತೆರಳಿದ್ದಾರೆ. ಪ್ರತಿಯೊಬ್ಬ ಮತದಾರರು ಈ ಮತದಾನದ ಹಬ್ಬದಲ್ಲಿ ಭಾಗಿಯಾಗಿ ಮತದಾನ ಮಾಡುವಂತೆ ಜಿಲ್ಲಾ ಚುನಾವಣಾಧಿಕಾರಿ (ಡಿಸಿ) ಮನವಿ ಮಾಡಿದ್ದಾರೆ.

ಹೌದು ಇಂದು ಬೆಳಗ್ಗೆ 7 ಗಂಟೆಯಿಂದ ಮತದಾನ ಪ್ರಕ್ರಿಯೆ ಆರಂಭವಾಗಲಿದ್ದು ಸಂಜೆ 5 ಗಂಟೆಯವರೆಗೆ ನಡೆಯಲಿದೆ. ಈ ಹಿನ್ನೆಲೆ ಜಿಲ್ಲಾಡಳಿತ ಸಕಲ ಸಿದ್ಧತೆ ಕೈಗೊಂಡಿದ್ದು, ಮತದಾರರ ಜಾತಿವಾರು ಲೆಕ್ಕಾಚಾರ ಮಾಡಲು ರಾಜಕೀಯ ಮುಖಂಡರು ಮುಂದಾಗಿದ್ದಾರೆ.

ಮತದಾರರು’ ಜಾತಿವಾರು ಲೆಕ್ಕಾಚಾರ

ಲಿಂಗಾಯತರು – 37,845
( ST ) – 31,729
SC ) – 29,106
ಮುಸ್ಲಿಂ – 64,246
ಕುರುಬ – 16,854
ಮರಾಠರು – 14,868
ಉಪ್ಪಾರ – 8,352
ಜೈನರು – 5,386
ಇತರೆ – 23,300
ಒಟ್ಟು ಮತದಾರರು – 2,31,683

ಪುರುಷ ಮತದಾರರು – 1,13,645
ಮಹಿಳಾ ಮತದಾರರು – 1,17,986
43 – ತೃತೀಯ ಲಿಂಗಿ ಮತದಾರರು ಇದ್ದಾರೆ.

ಒಟ್ಟು 284 ಮತಗಟ್ಟೆ ಕೇಂದ್ರ

ಸೂಕ್ಷ್ಮ & ಅತೀ ಸೂಕ್ಷ್ಮ ಮತಗಟ್ಟೆಗಳ ಮೇಲೆ ಪೊಲೀಸರು ಬಿಗಿ ಬಂದೋಬಸ್ತ್‌
ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 234 ಮತಗಟ್ಟೆ

50 ಮತಗಟ್ಟೆಗಳು ಗ್ರಾಮೀಣ ಪ್ರದೇಶದಲ್ಲಿದ್ದು, 76 ಅತಿಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಸಲಾಗಿದೆ.

ಮತಗಟ್ಟೆಗಳಲ್ಲಿ ಕುಡಿಯುವ ನೀರು, ವಿಶ್ರಾಂತಿ ಕೊಠಡಿ, ಶೌಚಾಲಯ ಸೇರಿದಂತೆ ಅಗತ್ಯ ಸಿದ್ಧತೆ.
ಎಲ್ಲ ಮತಗಟ್ಟೆಗಳಲ್ಲಿ ವೆಬ್‌ಕಾಸ್ಟಿಂಗ್‌ ವ್ಯವಸ್ಥೆ

ಮತಗಟ್ಟೆ ಅಧಿಕಾರಿ, ಸಹಾಯಕ ಮತಗಟ್ಟೆ ಅಧಿಕಾರಿ ಸೇರಿ 681 ಸಿಬ್ಬಂದಿಯನ್ನು ನಿಯೋಜನೆ
60 ವೀಕ್ಷಕರಿಂದ ಮತಗಟ್ಟೆಗಳ ಮೇಲೆ ನಿಗಾ
ಮತಯಂತ್ರಗಳ ಸಾಗಣೆಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (ಕೆಎಸ್‌ಆರ್‌ಟಿಸಿ) 28 ಬಸ್, 39 ಮಿನಿ ಬಸ್ ಹಾಗೂ 5 ಜೀಪ್‌ಗಳನ್ನು ಬಳಕೆ
ಮಸ್ಟರಿಂಗ್‌ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಶಾಲೆಯಲ್ಲಿ ತೆರೆದಿರುವ ಭದ್ರತಾ ಕೊಠಡಿಯಲ್ಲಿ ಮತಯಂತ್ರ ರವಾನೆ
ಮೇ 4ರಂದು ಮತ ಎಣಿಕೆ

About Author

Leave a Reply

Your email address will not be published. Required fields are marked *