ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ಶಾಸಕ ಎಸ್.ಎ.ರಾಮದಾಸ್ ಭಾಗಿ
1 min read
ಬೆಳಗಾವಿ: ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಯುತ್ತಿದ್ದು ಮಾನ್ಯ ಶಾಸಕರಾದ ಎಸ್.ಎ.ರಾಮದಾಸ್ ಅವರು ಭಾಗವಹಿಸಿದ್ದಾರೆ. ಅಧಿವೇಶನದ ಬಿಡುವಿನ ವೇಳೆಯಲ್ಲಿ ಗೋಕಾಕ್ ನ ಶಕ್ತಿ ಏಡ್ಸ್ ತಡೆಗಟ್ಟುವ ಮಹಿಳಾ ಸಂಘ ಇಲ್ಲಿಗೆ ಭೇಟಿ ನೀಡಿ ಅಲ್ಲಿನ ಮುಖಸ್ಥರೊಂದಿಗೆ ಸಿಬ್ಬಂದಿಗಳೊಂದಿಗೆ ಸಭೆ ನಡೆಸಿದರು.
ಫೀಮೇಲ್ ಸೆಕ್ಸ್ ವರ್ಕರ್ಸ್ ಗಳಿಗೆ ಒಂದು ಪರ್ಯಾಯ ವ್ಯವಸ್ಥೆ ಮಾಡಲು, ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವುದಕ್ಕೆ ಯಾವ ಕ್ರಮವನ್ನು ಕೈಗೊಳ್ಳಬೇಕು , ಸರ್ಕಾರದಿಂದ ಪೆನ್ಶನ್ ಸ್ಕೀಮ್ ನೀಡುವಂತದ್ದರ ಬಗ್ಗೆ ಹಾಗೂ ಯುವ ಜನಾಂಗಕ್ಕೆ ಒಂದೊಳ್ಳೆ ಜಾಗೃತಿ ನೀಡುವ ನಿಟ್ಟಿನಲ್ಲಿ ಇಂದು ಚರ್ಚಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು ಹೊಟ್ಟೆ ಪಾಡಿಗೋಸ್ಕರ ತಮ್ಮ ಮೈ ಮಾರಿಕೊಳ್ಳುವ ವೃತ್ತಿ ಸಮಾಜ ತಲೆ ತಗ್ಗಿಸುವಂಥಾ ವಿಷಯ ಹಾಗೂ ಸಮಾಜಕ್ಕೆ ಮಾರಕವಾದದ್ದು. ನಮ್ಮ ಮುಂದೆ ಇರುವ ಒಂದು ಸವಾಲೆಂದರೆ ಅಂತಹ ವ್ಯಕ್ತಿಗಳನ್ನು ಹುಡುಕಿ ಅವರಿಗೆ ಕೌಶಲ್ಯದ ತರಬೇತಿಯನ್ನು ನೀಡಿ ಕೈ ತುಂಬಾ ಕೆಲಸ ನೀಡಬೇಕಾಗಿದೆ. ಜೀವನೋಪಾಯಕ್ಕಾಗಿ ಸಂಪಾದನೆಗೆ ಬೇರೆ ಒಳ್ಳೆಯ ದಾರಿ ತೋರಿಸಬೇಕಾದ ಕರ್ತವ್ಯ ನಮ್ಮದಿದೆ. ಯುವಕ ಯುವತಿಯರು ತಮ್ಮ ಮೈ ಯನ್ನು ಮಾರಿಕೊಳ್ಳುವ ಶೇ.70 ರಷ್ಟು ಮಂದಿ ಕುಡಿತ, ಡ್ರಗ್ಸ್, ಜೂಜಾಟ ಈ ರೀತಿ ಕೆಟ್ಟ ಚಟುವಟಿಕೆಗಳೇ ತಮಗೆ ಜೀವನ ನಡೆಸಲು ಅನಿವಾರ್ಯ ಎಂದುಕೊಂಡಿದ್ದಾರೆ. ರಾಜ್ಯದ ದೃಷ್ಟಿಯಿಂದ , ದೇಶದ ಭವಿಷ್ಯದ ದೃಷ್ಟಿಯಿಂದ ಈ ದಶಕ ಬಹಳ ಮುಖ್ಯವಾದದ್ದಾಗಿದೆ, ಸರ್ಕಾರದ ಜೊತೆಗೆ ಸಮಾಜದ ಎಲ್ಲಾ ವರ್ಗಗಳು , ಜನ ಪ್ರತಿನಿಧಿಗಳು ತಳ ಮಟ್ಟಕ್ಕೆ ಇಳಿದು ಪ್ರೌಢ ಶಾಲೆಯಿಂದಲೇ ಮಕ್ಕಳ ಜೊತೆಗೆ ಸಮಾಲೋಚನೆ ಮಾಡಿ ಅವರನ್ನು ತಪ್ಪು ದಾರಿ ಹಿಡಿಯದಂತೆ ತಡೆಯಬೇಕಾದದ್ದು ನಮ್ಮ ಜವಾಬ್ದಾರಿ ಇದೆ. ಭಾರತದ ಭವಿಷ್ಯವನ್ನು ಬರೆಯುವಂತಹ ಯುವ ಜನತೆಗೆ ಒಂದೊಳ್ಳೆ ದಾರಿ ಕಲ್ಪಿಸಬೇಕು ಎಂದು ಇವತ್ತು ನಡೆಸಿದ ಸಭೆಯಲ್ಲಿ ವಿವಿಧ ಸ್ಥರದಲ್ಲಿರುವ ಕಮ್ಯುನಿಟ್ ಸೆಕ್ಸ್ ವರ್ಕರ್ಸ್, ಏಡ್ಸ್ ಪಾಸಿಟಿವ್, ಎಂ.ಎಸ್.ಎಂ ಇವೆಲ್ಲದರ ಬಗ್ಗೆ ಚರ್ಚೆ ಮಾಡಲಾಯಿತು. ಒಂದು ದೊಡ್ಡ ತಂಡದಲ್ಲಿ ರಾಜ್ಯಾದ್ಯಂತ ಜಾಗೃತಿ ಕಾರ್ಯಕ್ರಮ ಮಾಡಬೇಕು ಎಂದು ತೀರ್ಮಾನಿಸಲಾಯಿತು.
ಏಡ್ಸ್ ತಡೆಗಟ್ಟುವ ಮಹಿಳಾ ಸಂಘವು ಕೋವಿಡ್ ಸಮಯದಲ್ಲಿ ಮಹಿಳಾ ಸೆಕ್ಸ್ ವರ್ಕರ್ಸ್ ಗಳಿಗಾಗಿ ಆಹಾರವನ್ನು ಉಚಿತವಾಗಿ ನೀಡಿದ್ದಾರೆ, ಹೀಗಾಗಿ ಇಂತಹ ಸೇವೆ ಮಾಡುವ ಸಂಘಕ್ಕೆ ಸರ್ಕಾರದಿಂದ ಸೌಲಭ್ಯ ಒದಗಿಸುವುದಕ್ಕಾಗಿ ಸಂಬಂಧ ಪಟ್ಟ ಅಧಿಕಾರಿಗಳ ಜೊತೆಗೆ ಮಾತನಡುವುದಾಗಿ ಮಾನ್ಯ ಶಾಸಕರು ತಿಳಿಸಿದರು.
ಡಾ.ವೀರೇಶ್, ಮಹಾಂತೇಶ್, ಶಕ್ತಿ ಏಡ್ಸ್ ತಡೆಗಟ್ಟುವ ಮಹಿಳಾ ಸಂಘದ ಅಧ್ಯಕ್ಷರಾದ ಲಲಿತಾ ಹೊಸಮನಿ, ಕೋ ಆರ್ಡಿನೆಟರ್ ಸಂದೀಪ್, ಸಂಸ್ಥೆಯ ವಿವಿಧ ಪದಾಧಿಕಾರಿಗಳು, ಆಪ್ತ ಸಮಾಲೋಚಕರು, ಸಮಾಜ ಸೇವಕರುಗಳು ಉಪಸ್ಥಿತರಿದ್ದರು.