ಮಂಡ್ಯ ಜಿಲ್ಲೆಗೆ ESI ಆಸ್ಪತ್ರೆಗಾಗಿ ಸಂಸದೆ ಸುಮಲತಾ ಅಂಬರೀಶ್ ಮನವಿ!
ಮಂಡ್ಯ ಜಿಲ್ಲೆಯಲ್ಲಿ ಸುಸಜ್ಜಿತವಾದ 100 ಹಾಸಿಗೆಯ ESI ಆಸ್ಪತ್ರೆ ಸ್ಥಾಪಿಸುವ ಸಲುವಾಗಿ ಸಂಸದೆ ಸುಮಲತಾ ಅಂಬರೀಶ್ ಅವರು ಕೇಂದ್ರ ಸಚಿವರನ್ನ ಭೇಟಿಯಾಗಿದ್ದಾರೆ. ಕೇಂದ್ರ ಸಚಿವರಾದ ಭೂಪೇಂದರ್ ಯಾದವ್ ಅವರನ್ನು ನವದೆಹಲಿಯಲ್ಲಿ ಭೇಟಿಯಾದ ಅವರು ಮಂಡ್ಯಗೆ ಅವಶ್ಯಕತೆ ESI ಇರುವ ಆಸ್ಪತ್ರೆಯನ್ನ ಮಾಡಿಕೊಡಬೇಕೆಂದು ಮನವಿ ಸಲ್ಲಿಸಿದ್ದರು.

ಎಂಟು ಸಾವಿರಕ್ಕೂ ಅಧಿಕ ಮಹಿಳೆಯರು ಸೇರಿ ಸುಮಾರು ಹದಿನಾರು ಸಾವಿರ ವಿವಿಧ ಕಾರ್ಖಾನೆಯ ನೌಕರರು ಇರುವ ಜಿಲ್ಲೆಗೆ ತನ್ನದೇ ESI ಆಸ್ಪತ್ರೆಯ ಅಗತ್ಯದ ಬಗ್ಗೆ ಅವರಿಗೆ ಮನವರಿಕೆ ಮಾಡಿಕೊಟ್ಟರು. ಈ ವೇಳೆ ಸಚಿವರು ಕೂಡ ಈ ಬಗ್ಗೆ ಆದಷ್ಟು ಬೇಗ ಕ್ರಮ ವಹಿಸುವುದಾಗಿಯು ಭರವಸೆ ನೀಡಿದ್ದಾರೆ.