ಜಾನುವಾರು ಬಲಿ ಪಡೆದು ಜನರಲ್ಲಿ ಆತಂಕ ಸೃಷ್ಟಿಸಿದ ಹುಲಿ: ಹುಲಿ ಪತ್ತೆ ಕಾರ್ಯಚರಣೆ ಆರಂಭಿಸಿದ ಅರಣ್ಯ ಇಲಾಖೆ
1 min read
ಅಂತರಸಂತೆ: ಕಳೆದ 3-4 ದಿನಗಳಿಂದ ಅಂತರಸಂತೆ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಕಾಣಿಸಿಕೊಂಡು ಒಂದು ಜಾನುವಾರುವನ್ನು ಸಹ ಬಲಿ ಪಡೆದು ಜನರಲ್ಲಿ ಆತಂಕ ಸೃಷ್ಟಿಸಿರುವ ಹುಲಿ ಪತ್ತೆ ಕಾರ್ಯಚರಣೆಯನ್ನು ಮಂಗಳವಾರದಿಂದ ಅರಣ್ಯ ಇಲಾಖೆ ಆರಂಭಿಸಿದ್ದು, ಬೋನಿ ಇರಿಸಿ ಹುಲಿಯನ್ನು ಸೆರೆ ಹಿಡಿಯುವ ಪ್ರಯತ್ನ ಆರಂಭಿಸಿದೆ.
ಕಳೆದ ಭಾನುವಾರ ತಾಲ್ಲೂಕಿನ ಅಂತರಸಂತೆ ಗ್ರಾಮದ ಗೋವಿಂದರಾಜು ಎಂಬುವವರ ಜಾನುವಾರುವನ್ನು ಹುಲಿ ಬಲಿ ಪಡೆದಿಲ್ಲದೇ ಕುರಿಗಾಯಿ ಮಹಿಳೆ ಮತ್ತು ಗ್ರಾಮಸ್ಥರೊಬ್ಬರಿಗೂ ಕಾಣಿಸಿಕೊಂಡಿತ್ತು. ಬಳಿಕ ಆ ಸ್ಥಳದಲ್ಲಿ ಅರಣ್ಯ ಇಲಾಖೆ ಹುಲಿಯ ಚಲನವಲನಗಳ ಮೇಲೆ ನಿಗಾ ಇಡುವ ಸಲುವಾಗಿ ಕ್ಯಾಮೆರಾಗಳನ್ನು ಸಹ ಅಳವಡಿಸಿತ್ತು. ಸದ್ಯ ಆ ಕ್ಯಾಮೆರಾದಲ್ಲಿ ಹುಲಿಯ ಚಿತ್ರ ಸೆರೆಯಾಗಿದ್ದು, ಹುಲಿ ಇರುವುದು ಖಚಿತಗೊಂಡಿದೆ. ಬಳಿಕ ಇದೀಗಾ ಹುಲಿಯ ಪತ್ತೆ ಕಾರ್ಯಚರಣೆ ಆರಂಭಿಸಿರುವ ಅರಣ್ಯ ಇಲಾಖೆ ಹಸುವಿನ ಮೃತದೇಹದ ಸಮೀಪ ಬೋನ್ ಇರಿಸಿ ಹುಲಿಯ ಸೆರೆ ಹಿಡಿಯುವ ಪ್ರಯತ್ನ ಆರಂಭಿಸಿದೆ.

ಅಲ್ಲದೇ ಈಗಾಗಲೇ ಸುತ್ತಮುತ್ತಲಿನ ಸ್ಥಳಗಳಲ್ಲಿ 20 ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಹುಲಿ ಬೋನಿಗೆ ಬರದಿದ್ದಲ್ಲಿ ಹುಲಿ ಇರುವ ಸ್ಥಳವನ್ನು ಪತ್ತೇ ಮಾಡಿ ಬಳಿಕ ಮುಂದಿನ ಕ್ರಮ ಕೈಗೊಳ್ಳವುದಾಗಿ ಇಲಾಖೆ ತಿಳಿಸಿದೆ.
ಇದರೊಂದಿಗೆ ಅರಣ್ಯ ಇಲಾಖೆ ಈಗಾಗಲೇ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದು, ಧ್ವನಿವರ್ಧಕದ ಮೂಲಕ ಅಂತರಸಂತೆ, ನೂರಲಕುಪ್ಪೆ ಸೇರಿದಂತೆ ಅಕ್ಕಪಕ್ಕದ ಗ್ರಾಮದಲ್ಲಿ ರೈತರು ಜಮೀನುಗಳಿಗೆ ಹೋಗದಂತೆ, ದನಕರುಗಳನ್ನು ಹೊರಗೆ ಬಿಡದಂತೆ ಪ್ರಚಾರ ಮಾಡಲಾಗುತ್ತಿದೆ.
ಅಧಿಕಾರಿಗಳ ಸಭೆ: ಇನ್ನೂ ಹುಲಿಯ ಸೆರೆಯ ಕುರಿತಂತೆ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಡಿಸಿಎಫ್ ಡಿ. ಮಹೇಶ್ ಕುಮಾರ್ ಅಧ್ಯಕ್ಷತೆಯಲ್ಲಿ ಅಧಿಕಾರಿಗಳ ಸಭೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವ ಬಗ್ಗೆ ಸೂಚಿಸಿದರು.
ಸ್ಥಳದಲ್ಲಿ ನಾಗರಹೊಳೆ ಡಿಸಿಎಫ್ ಮಹೇಶ್ ಕುಮಾರ್, ಎಸಿಎಫ್ ಗಳಾದ ಗೋಪಾಲ್, ಮಹದೇವ್, ವಲಯ ಅರಣ್ಯಾಧಿಕಾರಿಗಳಾದ ಸಿದ್ದರಾಜು, ಮಧು, ಗಿರೀಶ್, ಸಿಬ್ಬಂದಿಗಳಾದ ಅಂಥೋನಿ, ರಾಜು, ರಾಹುಲ್, ಎಸ್ ಟಿಪಿಎಫ್ ಸಿಬ್ಬಂದಿಗಳು ಮುಂತಾದವರು ಹಾಜರಿದ್ದರು.