ಈ ಬಾರಿಯು ದಸರೆಯಲ್ಲಿ ಅಂಬಾರಿ ಹೊರಲಿದ್ದಾನೆ ಅಭಿಮನ್ಯು.!

ಮೈಸೂರು : 2025ರ ವಿಶ್ವವಿಖ್ಯಾತ ನಾಡಹಬ್ಬ ದಸರೆಯ ಅಂಬಾರಿಯನ್ನ ಈ ಬಾರಿಯು ಅಭಿಮನ್ಯು ಹೊರಲಿದ್ದಾನೆ ಎಂದು ಅರಣ್ಯ ಇಲಾಖೆ ಬಲ ಮೂಲಗಳಿಂದ ಮಾಹಿತಿ ಬಂದಿದೆ. ಹೌದು, ವಿಶ್ವವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವ 2025ಕ್ಕೆ ಈಗಾಗಲೇ ಅರಣ್ಯ ಇಲಾಖೆ ಗಜಪಡೆಯ ಆಯ್ಕೆ ಪ್ರಕ್ರಿಯೆ ಶುರು ಮಾಡಿದೆ. ಈ ನಡುವೆ
ಹೆಣ್ಣಾನೆಗಳಿಗೆ ಪ್ರಗ್ನೆನ್ಸಿ ಟೆಸ್ಟ್ ಕೂಡ ಮಾಡಿಸಲಾಗಿದೆ.

ಎಸ್, ಈ ಬಾರಿ ಕುಂಕಿ‌ ಆನೆ ಸೇರಿ ಆರು ಹೆಣ್ಣಾನೆಗಳು ಬರಲಿದ್ದು,‌ ಆನೆಗಳ ಹೆಲ್ತ್ ಕಾರ್ಡ್ ದಸರಾ ಹೈ ಪವರ್ ಕಮಿಟಿಗೆ ಸಲ್ಲಿಕೆಯಾಗಲಿದೆ. ಯಾವೆಲ್ಲ ಆನೆಗಳು ಈ ಬಾರಿ ದಸರಾದಲ್ಲಿ ಭಾಗಿಯಾಗತ್ತೆ ಅನ್ನೋ ಅಂತಿಮ ಪಟ್ಟಿ ಹೈ ಪವರ್ ಕಮಿಟಿ ಬಿಡುಗಡೆ ಮಾಡತ್ತೆ. ಈಗಾಗಲೇ ಮತ್ತಿಗೂಡು, ದುಬಾರೆ, ಬಳ್ಳೆ, ಸೇರಿದಂತೆ 6 ಕ್ಯಾಂಪ್ ನಿಂದ ಆನೆಗಳು ಬರಲಿದ್ದು, ಕಳೆದ ಬಾರಿ ಏಕಲವ್ಯ ಹೊಸ ಆನೆಯಾಗಿ ಬಂದಿತ್ತು.

ಈ ಬಾರಿಯು ಅಭಿಮನ್ಯುನೇ ಕ್ಯಾಪ್ಟನ್.!

ಈ‌ ಬಾರಿಯೂ ಅಭಿಮನ್ಯುಗೆ ಈಗ 59 ವರ್ಷ ಆಗಿದ್ದು ಫುಲ್ ಫಿಟ್ ಅಂಡ್ ಫೈನ್ ಆಗಿದ್ದಾನೆ. ಈ ಬಾರಿಯೂ ಆತನೇ ಗಜಪಡೆ ಲೀಡ್ ಮಾಡ್ತಾನೆ. ಅವನ ನಂತರದಲ್ಲಿ ಮಹೇಂದ್ರ, ಧನಂಜಯ, ಹೀಗೆ ಅನೇಕ ಆನೆಗಳಿವೆ. ಈ ಮಧ್ಯೆ ಏಕಲವ್ಯ ಕೂಡ ಕ್ಯೂಂಬಿಂಗ್ ನಲ್ಲಿ ಹೆದರದೆ ಬಾಗಿಯಾಗುತ್ತಿದ್ದಾನೆ. ಆತನು ಕೂಡ ಭವಿಷ್ಯದಲ್ಲಿ ಒಳ್ಳೆಯ ಕುಮ್ಕಿ ಆನೆಯಾಗುತ್ತಾನೆಂಬ ವಿಶ್ವಾಸವಿದ್ದು, ಮುಂದಿನ ವಾರ ಗಜಪಡೆಯ ಲಿಸ್ಟ್ ಬಿಡುಗಡೆಯಾಗಲಿದ್ದು ಆಗಸ್ಟ್ 4 ರಂದು ಗಜಪಡೆ ಮೈಸೂರಿಗೆ ಆಗಮಿಸುವ ಸಾಧ್ಯತೆ ಇದೆ.

About Author

Leave a Reply

Your email address will not be published. Required fields are marked *