ಗುಂಡ್ಲುಪೇಟೆಯ ಕಲ್ಲು ಕ್ವಾರಿಯಲ್ಲಿ ಗುಡ್ಡ ಕುಸಿತ’ ಹಲವರು ನಾಪತ್ತೆ!

ಕ್ವಾರೆ ಕುಸಿತ’ ಸಾವಿನ ಮಾಹಿತಿ ಅಲಭ್ಯ’ ಹಲವರು ಅವಶೇಷಗಳ ಅಡಿ ಸಿಲುಕಿರುವ ಶಂಕೆ

ಚಾಮರಾಜನಗರ: ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಸಮೀಪ ಮಡಹಳ್ಳಿ ಗ್ರಾಮದ ಸರ್ವೆ ನಂಬರ್ 192ರಲ್ಲಿ ನಡೆಯುತ್ತಿದ್ದ ಬಿಳಿ ಕಲ್ಲು ಗಣಿಗಾರಿಕೆ ಪ್ರದೇಶದಲ್ಲಿ ದಿಢೀರನೆ ಗುಡ್ಡ ಕುಸಿತಗೊಂಡಿದೆ.

ಬಿಳಿಕಲ್ಲು ಕ್ವಾರೆಯಲ್ಲಿ ಕಾರ್ಮಿಕರ ಕೆಲಸ ನಿರ್ವಹಿಸುತ್ತಿದ್ದು ಅವರ ಮೇಲೆ ಗುಡ್ಡ ಕುಸಿದು ಕಾರ್ಮಿಕರು ಸಾವನ್ನಪ್ಪಿದ್ದಾರೆಂಬ ಶಂಕೆ ವ್ಯಕ್ತವಾಗಿದೆ. ಜೊತೆಗೆ ಇಲ್ಲಿ ಕೆಲಸ ನಿರ್ವಹಿಸುತ್ತಿದರು 30ಕ್ಕೂ ಹೆಚ್ಚು ಜನರು ಗಂಭೀರ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ‌.

ಗುಂಡ್ಲುಪೇಟೆ ತಾಲೂಕಿನ ಮಡಹಳ್ಳಿ ಸಮೀಪದ ಗುಮ್ಮಕಲ್ಲುಗುಡ್ಡದಲ್ಲಿ ಈ ಘಟನೆ ಸಂಭವಿಸಿದ್ದು, ಕೇರಳ ಮೂಲದ ಹಕೀಮ್ ಎಂಬುವವರು ಕ್ವಾರಿ ನಡೆಸುತ್ತಿದ್ದರು ಎಂದು ತಿಳಿದು ಬಂದಿದೆ. ಕೇರಳ, ರಾಜಸ್ಥಾನ, ತಮಿಳುನಾಡಿನ ಬಹುತೇಕರು ಇಲ್ಲಿ ಕೆಲಸ ನಿರ್ವಹಿಸುತ್ತಿದ್ದು ಸಾವಿನ ಲೆಕ್ಕಾಚಾರ ಮಾತ್ರ ನಿಗೂಢವಾಗಿದೆ.

  • ಕೆಲಸ ನಿರ್ವಹಿಸುವವರು ಸ್ಥಳೀಯರಾಗಿದ್ದರೆ ಕೆಲಸಕ್ಕೆ ಹೋಗಿದ್ದವರು ಸಂಜೆ ಬಾರದಿದ್ದರೆ ನಾಪತ್ತೆ ಪ್ರಕರಣವೊ? ಸಾವನ್ನಪ್ಪಿದ ಪ್ರಕರಣವೊ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗುತ್ತಿತ್ತು. ಆದರೆ ಅನ್ಯ ರಾಜ್ಯದವರಾದ್ದರಿಂದ ಸದ್ಯಕ್ಕೆ ಗಾಯಗೊಂಡವರ ವಿವರ ಲಭ್ಯವಾದರೂ ಸಾವಿನ ಮಾಹಿತಿ ಲಭ್ಯ ಅಸಾಧ್ಯವಾಗಿದೆ.

ಗುಡ್ಡ ಕುಸಿತಕ್ಕೆ ನುಜ್ಜುಗುಜ್ಜಾಗಿರುವ ಟಿಪ್ಪರ್ ಲಾರಿಗಳು!

ಬಿಳಿಕಲ್ಲು ಗುಡ್ಡ ಕುಸಿತದಿಂದ ಟಿಪ್ಪರ್, ಲಾರಿಗಳು ಜಖಂ ಆಗಿದೆ‌. ಕೆಲವು ಲಾರಿಯೊಳಗೆ ಸಿಲುಕಿರುವ ಚಾಲಕನ ರಕ್ಷಣೆಗೆ ಅಗ್ನಿಶಾಮಕ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ. ಗುಡ್ಡ ಕುಸಿತದ ತೀವ್ರತೆಗೆ ಆಗಸದಲ್ಲಿ ದೂಳು ಆವರಿಸಿದೆ. ಸ್ಥಳಕ್ಕೆ ಚಾಮರಾಜನಗರ ಎಎಸ್ಪಿ ಸುಂದರರಾಜು ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದಾರೆ. ಇತ್ತ ಜಿಲ್ಲಾ ಉಸ್ತುವಾರಿ ಸಚಿವ ಸೋಮಣ್ಣ ಅವರು ಸಹ ಸಾವಿನ ಬಗ್ಗೆ ಸದ್ಯಕ್ಕೆ ಯಾವುದೇ ವರದಿಯಾಗಿಲ್ಲ ಎಂದು ಮಾಧ್ಯಮ ಪ್ರಕಟಣೆ ಹೊರಡಿಸಿದ್ದಾರೆ.

ಘಟನಾ ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್ ರವಿಶಂಕರ್ ಎಎಸ್ಪಿ ಸುಂದರ್ ರಾಜ್, ಡಿವೈಎಸ್ಪಿ ಪ್ರಿಯದರ್ಶಿನಿ ಸಾನಿಕೊಪ್ಪ ಭೇಟಿ ನೀಡಿದ್ದಾರೆ. ಈ ಮಧ್ಯೆ ಘಟನೆ ಸಂಪೂರ್ಣ ಮಾಹಿತಿಯನ್ನು ದಕ್ಷಿಣ ವಲಯ ಪೊಲೀಸ್ ಮಹಾನಿರ್ದೇಶಕರು ಪಡೆದುಕೊಂಡಿದ್ದಾರೆ.

About Author

Leave a Reply

Your email address will not be published. Required fields are marked *