ಪ್ರತಾಪ್ ಸಿಂಹ ಸುಳ್ಳು ಹೇಳಿಕೊಂಡು ತಿರುಗಾಡುತ್ತಿದ್ದಾರೆ: ಎಂ ಲಕ್ಷ್ಮಣ್ ಆರೋಪ..
ಮೈಸೂರು:
“ಜನರಿಗೆ ಅನುಕೂಲವಾಗುವ ಅಂಶಗಳು ಈ ಬಾರಿಯ ರಾಜ್ಯ ಬಜೆಟ್ ನಲ್ಲಿಲ್ಲ.” ಎಂದು ಕೆ ಆರ್ ಆಸ್ಪತ್ರೆಯ ಉನ್ನತೀಕರಣಕ್ಕೆ 89 ಕೋಟಿ ಅನುದಾನ ಮಂಜೂರು ಮಾಡಿಸಿದ್ದೇನೆಂದು ಹೇಳಿರುವ ಸಂಸದ ಪ್ರತಾಪ್ ಸಿಂಹ ಹೇಳಿಕೆಗೆ ಎಂ ಲಕ್ಷ್ಮಣ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಇಂದು ಮೈಸೂರಿನಲ್ಲಿ ಮಾತನಾಡಿದ ಎಂ ಲಕ್ಷ್ಮಣ್ “ಪ್ರತಾಪ್ ಸಿಂಹರವರೇ ನೀವು ಬರೀ ಸುಳ್ಳು ಹೇಳಿಕೊಂಡು ತಿರುಗಾಡುತ್ತಿದ್ದೀರಿ. ಏರ್ ಪೋರ್ಟ್ ವಿಚಾರದಲ್ಲೂ ಸುಳ್ಳು ಹೇಳಿಕೆ ನೀಡ್ತಿದೀರಿ. ರನ್ ವೇ ವಿಸ್ತರಣೆಗಾಗಿ ಈಗಿರುವ ರಾಷ್ಟ್ರೀಯ ಹೆದ್ದಾರಿಯನ್ನು 2 ಕಿ ಮೀ ದೂರದಲ್ಲಿ ನಿರ್ಮಿಸಬೇಕು. ನಿಮ್ಮ ಕಾಲದಲ್ಲಿ ಇದು ಸಾಧ್ಯವಾಗುವುದಿಲ್ಲ. ಒಂದೆರಡು ಯೋಜನೆಗಳನ್ನು ಘೋಷಣೆ ಮಾಡಿಸಿ ನಾನೇ ಮಾಡಿಸಿದೆ ಎಂದು ಹೇಳ್ತದೀರಿ. ಈ ಮೂಲಕ ಬಿಜೆಪಿ ಶಾಸಕರ ಕೊಡುಗೆ ಏನು ಇಲ್ಲವೆಂಬ ಸಂದೇಶ ನೀಡಿದ್ದೀರಿ.” ಹೇಳಿಕೆ ನೀಡಿದ್ದಾರೆ.