ಪೆಟ್ರೋಲ್ 150 ರೂ/ ಗ್ಯಾಸ್ ಬೆಲೆ ಸಾವಿರ ರೂ ಆಗಲಿದೆ!? ಜಾಗತಿಕ ಹಣಕಾಸು ಸಂಸ್ಥೆಯಿಂದ ಎಚ್ಚರಿಕೆ ಸಂದೇಶ!
1 min read
° ಜನರಿಗೆ ಮತ್ತೊಂದು ಶಾಕ್ ನೀಡಲು ಕೇಂದ್ರ ಸರ್ಕಾರ ಸಿದ್ದತೆ!?
° 150 ರೂ ಆಗಲಿದೆಯಂತೆ ಪೆಟ್ರೋಲ್ ಬೆಲೆ/ ಡೀಸೆಲ್ 140 ರೂ ಆಗಲಿದೆಯಂತೆ.
° ತೈಲ ಬೆಲೆ ಹೆಚ್ಚಾದ್ರೆ ಗೃಹೋಪಯೋಗಿ ಗ್ಯಾಸ್ ಸಿಲಿಂಡರ್ ಬೆಲೆಯು ಹೆಚ್ಚಳ.
° ಬರೋಬ್ಬರಿ 100ರೂ ಹೆಚ್ಚಿಸಿ, ಸಾವಿರ ಗಡಿ ದಾಟಿಸುತ್ತೆ ಸರ್ಕಾರ!?
° ಬಡವರ ಅಳಲು ಕೇಳದೆ ಕೇಂದ್ರ ಸರ್ಕಾರದ ಕಣ್ಣಾಮುಚ್ಚಾಲೇ ಆಟ
ಅಬ್ಬಾಬ್ಬಾ ಇನ್ಮುಂದೆ ಜೀವನ ನಡೆಸೋದು ಬಲು ಕಷ್ಟ ಕಷ್ಟ. ಒಂದು ಕಡೆ ತೈಲ ಬೆಲೆ ಈಗಾಗಲೇ ನೂರರ ಗಡಿ ದಾಟಿ 150ರತ್ತ ಸಾಗಲು ಸಿದ್ದವಾಗ್ತಿದೆ. ಇತ್ತ ಗ್ಯಾಸ್ ರೇಟ್ 25 ರೂ, 50 ರೂ ಅಂತ ಏರಿಕೆ ಆಗುತ್ತಿದ್ದಂತೆ ಇದೀಗಾ ದಿಢೀರನೇ ಏಕಾಏಕಿ ನೂರು ರೂ ಹೆಚ್ಚು ಮಾಡಲು ಸದ್ದಿಲ್ಲದೆ ಸಿದ್ದತೆ ನಡೆಯುತ್ತಿದೆ ಎಂಬ ಮಾತುಗಳು ಕೇಳಿ ಬಂದಿದೆ.
ದೇಶಕ್ಕೆ ಅದ್ಯಾಕೋ ಕೊರೊನಾ ಬಂತೋ ಗೊತ್ತಿಲ್ಲ. ಅಂದಿನಿಂದ ಶುರುವಾದ ಈ ಬೆಲೆ ಏರಿಕೆಯ ಬಿಸಿ ಇವತ್ತು ಸಹ ಜನರಿಗೆ ಸುಡಲು ಆರಂಭಿಸಿದೆ. ಜನಸಾಮಾನ್ಯರ ಮೇಕೆ ಬೆಲೆ ಏರಿಕ ಬಿಸಿ ಜೊತೆಗೆ ಅನಾರೋಗ್ಯ ಸೇರಿದಂತೆ ಹಲವು ಸಮಸ್ಯೆಗಳು ಎದುರಾಗಿವೆ.
ಈಗಾಗಲೇ ದೇಶದಲ್ಲಿ ಮೊದಲ ಲಾಕ್ ಡೌನ್ ಮುಗಿದಾಗಿನಿಂದ ಸಿಲಿಂಡರ್, ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಾಗುತ್ತಲೇ ಇದೆ. ಇದರಿಂದ ಜನರು ಸಂಕಷ್ಟಕ್ಕೀಡಾಗಿದ್ದಾರೆ. ಒಂದು ಕಡೆ ಪೆಟ್ರೋಲ್, ಡೀಸೆಲ್ ಬೆಲೆ ಗಗನಕ್ಕೇರಿದ್ದರೆ, ಮತ್ತೊಂದು ಕಡೆ ಸಿಲಿಂಡರ್ ಬೆಲೆ ಏರಿಕೆ ಜನ ಸಾಮಾನ್ಯಾರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಆದರೆ ಇದರ ಮಧ್ಯೆಯೇ ಜನರಿಗೆ ಮತ್ತೊಂದು ಸುತ್ತಿನ ಶಾಕ್ ನೀಡಲಾಗ್ತಿದೆ. ಅದೇ ಗ್ಯಾಸ್ ಬೆಲೆ ಮತ್ತೇ ಏರಿಕೆ.
ತೈಲ ಹಾಗೂ ಗ್ಯಾಸ್ ಎಷ್ಟಕ್ಕೆ ಸಿಗಲಿದೆ!?
ಹೌದು, ಇನ್ನು ಕೆಲವೇ ದಿನಗಳಲ್ಲಿ ತೈಲ ಬೆಲೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಬರೋಬ್ಬರಿ 150 ರೂಪಾಯಿ ಕೊಟ್ಟು ಪೆಟ್ರೋಲ್ ಹಾಗೂ ಡೀಸೆಲ್ 140 ರೂಪಾಯಿ ಕೊಟ್ಟು ಖರೀದಿ ಮಾಡುವ ಕಾಲ ಬರುತ್ತೆ ಎನ್ನಲಾಗ್ತಿದೆ. ಹಾಗಂತ ಜಾಗತಿಕ ಹಣಕಾಸು ಸಂಸ್ಥೆ ಗೋಲ್ಡ್ಮನ್ ಸ್ಯಾಕ್ಸ್ ಮುಂದಿನ ದಿನಗಳಲ್ಲಿ ಕಚ್ಚಾ ತೈಲ ಬೆಲೆ ಶೇ.30 ರಷ್ಟು ಹೆಚ್ಚಾಗಲಿದೆ ಎಂದು ತಿಳಿಸಿದೆ.
ಇದರಿಂದ ಒಂದು ಬ್ಯಾರೆಲ್ ಕಚ್ಚಾ ತೈಲ ಬೆಲೆ ಪ್ರಸ್ತುತ 85 ಡಾಲರ್ ಇದೆ. ಅದೇ ಬೆಲೆ ಏರಿಕೆ ಮಾಡಿದರೆ ಮುಂದಿನ ವರ್ಷ ಒಂದು ಬ್ಯಾರೆಲ್ 110 ಡಾಲರ್ ಆಗಲಿದೆ. ಇದರಿಂದ ಮುಂದಿನ ವರ್ಷದಿಂದ ಪ್ರತಿ ಲೀಟರ್ ಪೆಟ್ರೋಲ್ ಗೆ 150 ರೂಪಾಯಿ ಆಗಲಿದೆ. ಡೀಸೆಲ್ 140 ರೂಪಾಯಿ ಆಗೋದು ಶತಸಿದ್ಧ.
ಹಾಗೊಂದು ವೇಳೆ, ಪೆಟ್ರೋಲ್, ಡೀಸೆಲ್ ಬೆಲೆ ಜಾಸ್ತಿ ಆದರೆ, ಅಡುಗೆ ಅನಿಲ ಬೆಲೆ 1000 ರೂಪಾಯಿ
ಗಡಿ ದಾಟೋದು ಗ್ಯಾರೆಂಟಿ. ಈಗಾಗಲೇ, ಜನರಿಗೆ ಬೆಲೆ ಏರಿಕೆಯ ಬಿಸಿ ತಟ್ಟಿದೆ. ಹೀಗೆ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಾಗುತ್ತಿದ್ದರೆ, ದಿನಬಳಕೆ ವಸ್ತುಗಳ ಬೆಲೆಯೂ ಏರಿಕೆಯಾಗುತ್ತದೆ ಎಂದು ಜನರು ಆತಂಕ ವ್ಯಕ್ತಪಡಿಸಿದ್ದಾರೆ. ಆದರೆ, ಕೇಂದ್ರ ಸರ್ಕಾರ ಮಾತ್ರ ಕಣ್ಮುಚ್ಚಿ ಕುಳಿತಿದೆ.
ಅತ್ತ ಮನೆಯಿಂದ ಹೊರಬರಲು ತಮ್ಮ ವಾಹನಗಳಿಗೆ ಪೆಟ್ರೋಲ್ ಹಾಕಿಸಬೇಕಲ್ಲ ಎಂಬ ಸಂಕಟ ಅನುಭವಿಸುತ್ತಿರುವ ಜನ ಇತ್ತ ಮನೆಯಲ್ಲಿ ಅಡುಗೆ ಮಾಡಲು ಗ್ಯಾಸ್ ಬಳಸಬೇಕಾ ಎಂದು ಯೋಚಿಸುವಂತಾಗಿದೆ. ದಿನ ದಿನಕ್ಕೂ ಗಗನಕ್ಕೇರುತ್ತಿರುವ ಗ್ಯಾಸ್ ಸಿಲಿಂಡರ್ ಬೆಲೆ ಕಂಡು ಜನ ಕಂಗಾಲಾಗಿದ್ದಾರೆ. ಆದರೆ ಜನರು ಇಡೀ ಶಾಪ ಹಾಕ್ತಿದ್ರು ಸರ್ಕಾರ ಮಾತ್ರ ಯಾಕೆ ಸುಮ್ಮನಿದೆ ಎಂಬುದೇ ಯಕ್ಷ ಪ್ರಶ್ನೆ..
ನನ್ನೂರು ಮೈಸೂರು ಟೀಂ.