T-20 ನಾಯಕತ್ವಕ್ಕೆ ಕ್ಯಾಪ್ಟನ್ ವಿರಾಟ್ ಕೊಹ್ಲಿ ರಾಜೀನಾಮೆ ನೀಡಿದ್ದಾರೆ.
1 min read
T-20 ವಿಶ್ವಕಪ್ ಲೀಗ್ ಹಂತದಲ್ಲೇ ಮುಗ್ಗರಿಸಿದ ಭಾರತ ತಂಡ- ಕೊನೆಯ ಪಂದ್ಯದಲ್ಲಿ ನಮೀಬಿಯಾ ವಿರುದ್ದ ತಂಡವನ್ನು ಮುನ್ನಡೆಸುವ ಮೂಲಕ ಕೊಹ್ಲಿ ಕೊನೆಯ ಬಾರಿ T-20 ತಂಡದ ನಾಯಕನಾಗಿ ಆಟವಾಡಿದರು. ಈ ಮೂಲಕ ಅಂತಿಮ T-20 ಪಂದ್ಯಕ್ಕೆ ಕ್ಯಾಪ್ಟನ್ ಆಗಿ ಗೆಲುವು ಸಾಧಿಸಿದ್ದು ಇದೀಗಾ ರಾಜೀನಾಮೆ ನೀಡಿದ್ದಾರೆ.
ಈ ಬಾರಿ ಟ್ರೋಫಿ ಗೆಲ್ಲುವ ಫೇವರೇಟ್ ತಂಡವಾಗಿ ವಿಶ್ವಕಪ್ನಲ್ಲಿ ಕಾಣಿಸಿಕೊಂಡಿದ್ದ ಟೀಮ್ ಇಂಡಿಯಾ, ಲೀಗ್ ಹಂತದಿಂದಲೇ ಹೊರಬೀಳುವ ಮೂಲಕ ನಿರಾಸೆ ಮೂಡಿಸಿತು.
2017 ರಲ್ಲಿ T-20 ತಂಡದ ಚುಕ್ಕಾಣಿ ಹಿಡಿದ ವಿರಾಟ್ ಕೊಹ್ಲಿ ಇದುವರೆಗೆ 50 ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ್ದಾರೆ.
ಇದರಲ್ಲಿ 30 ಪಂದ್ಯಗಳಲ್ಲಿ ತಂಡವನ್ನು ಗೆಲುವಿನ ದಡ ಸೇರಿಸಿದ್ದರು. ಇನ್ನು 4 ಪಂದ್ಯಗಳಲ್ಲಿ ಫಲಿತಾಂಶ ಮೂಡಿಬರದಿದ್ದರೆ, 16 ಪಂದ್ಯಗಳಲ್ಲಿ ಟೀಮ್ ಇಂಡಿಯಾ ಸೋಲನುಭವಿಸಿತ್ತು.