ವಿಶ್ವೇಶತೀರ್ಥ ಶ್ರೀಗಳ ನಿಂದನೆ: ಹಂಸಲೇಖ ವಿರುದ್ಧ ಕ್ರಮಕ್ಕೆ ಆಗ್ರಹ
ಮೈಸೂರು: ಮೈಸೂರಿನಲ್ಲಿ ಗುರುವಾರ ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘ ಹಾಗೂ ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆ ಮತ್ತು ಶ್ರೀ ಕೃಷ್ಣ ಮಿತ್ರ ಮಂಡಳಿ ಹಾಗೂ ಶ್ರೀಕೃಷ್ಣ ಟ್ರಸ್ಟ್ ಹಾಗೂ ತುಳು ಶಿವಳ್ಳಿ ಮಾಧ್ವ ಬ್ರಾಹ್ಮಣ ಮಹಾಸಂಘ ವತಿಯಿಂದ ಟಿ ಕೆ ಲೇಔಟ್ ನಲ್ಲಿರುವ ಕೃಷ್ಣಧಾಮ ಮುಂಭಾಗ ಹಂಸಲೇಖ ವಿರುದ್ಧ ಘೋಷಣೆ ಕೂಗಿ ಬೃಹತ್ ಪ್ರತಿಭಟನೆ ನಡೆಸಲಾಯಿತು
ರಾಷ್ಟ್ರ ಸಂತ, ಸಮಗ್ರ ಹಿಂದೂ ಸಮಾಜದ ಹಿತಚಿಂತಕರಾಗಿದ್ದ ಪೇಜಾವರ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಬಗ್ಗೆ ಅವಹೇಳನಕಾರಿಯಾಗಿ ಮೈದೂರಿನ ಕಾರ್ಯಕ್ರಮದಲ್ಲಿ ನಿಂದಿಸಿರುವ ಚಲನಚಿತ್ರ ಗೀತೆಗಳ ಸಾಹಿತ್ಯ ರಚನೆಕಾರ ಹಂಸಲೇಖ ವಿರುದ್ಧ ಕ್ರಮ ಕೈಗೊಂಡು ಆರಕ್ಷಕ ಇಲಾಖೆ ಆತನ ಬಂಧಿಸಿ ಒತ್ತಾಯಿಸುವಂತೆ ಬ್ರಾಹ್ಮಣ ವಿವಿಧ ಸಂಘಗಳು ಒಟ್ಟಾಗಿ ಸೇರಿ ಬೃಹತ್ ಪ್ರತಿಭಟನೆ ನಡೆಸಲಾಯಿತು, ನಂತರ ಸರಸ್ವತಿಪುರಂ ಆರಕ್ಷಕ ಠಾಣೆಗೆ ಹಂಸಲೇಖರನ್ನು ಬಂಧಿಸುವಂತೆ ದೂರು ನೀಡಲಾಯಿತು,
ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಡಿಟಿ. ಪ್ರಕಾಶ್ ರವರು ಮಾತನಾಡಿ ಮೈಸೂರಿನ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ ಅಶುದ್ಧ ಶಬ್ದಗಳನ್ನು ಪ್ರಯೋಗಿಸಿ ಪೇಜಾವರ ಶ್ರೀಗಳನ್ನು ನಿಂದಿಸಿದ್ದಾರೆ. ಅದಲ್ಲದೆ ಹಿಂದೂಗಳ ಧಾರ್ಮಿಕ ಭಾವನೆ ಬಿಳಿಗಿರಿಯ ರಂಗನಾಥ ಸ್ವಾಮಿ ಪೂಜಾ ಕೈಂಕರ್ಯದ ಕುರಿತು ಹಿಂದೂ ಸಂಪ್ರದಾಯಗಳ ಅವಹೇಳನ ಬಗ್ಗೆ ಅವಹೇಳನ ಮಾಡಿರುವುದು ಖಂಡನೀಯ ಇದರ ಬಗ್ಗೆ ಹಂಸಲೇಖ ಸಾರ್ವಜನಿಕವಾಗಿ ಬಂದು ಕ್ಷಮಾಪಣೆ ಕೇಳಬೇಕು, ಕೇಳದಿದ್ದ ಸಂಧರ್ಭದಲ್ಲಿ ಇನ್ನಷ್ಟು ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕೆದಡುವ ಸಂಧರಭವಗಾತ್ತದೆ ಆರಕ್ಷಕ ಇಲಾಖೆ ಗಂಗರಾಜು ಹಂಸಲೇಖನನ್ನ ಬಂಧಿಸಿ ಗಡಿಪಾರು ಮಾಡಬೇಕು ಎಂದು ಆಗ್ರಹಿಸಿದರು,
ನಂತರ ತುಳು ಶಿವಳ್ಳಿ ಮಾಧ್ವ ಬ್ರಾಹ್ಮಣ ಮಹಾಮಂಡಳ ಅಧ್ಯಕ್ಷರಾದ ರವಿ ಶಾಸ್ತ್ರಿ ರವರು ಮಾತನಾಡಿ ಹಂಸಲೇಖ ಅವರು ಜನ ಸಮೂಹದಲ್ಲಿ ಗುರುಗಳನ್ನು ಹಾಗೂ ಆಚರಣೆಗಳನ್ನು ನಿಂದಿಸಿ, ಒಂದು ಕೋಣೆಯಲ್ಲಿ ನಿಂತು ವಿಡಿಯೋ ಮಾಡಿ ಕ್ಷಮೆಯಾಚಿಸುವದು ಸರಿಯಲ್ಲ. ಅಸಂಖ್ಯಾತ ಹಿಂದೂಗಳ ಮನಸ್ಸು ನೋಯಿಸಿರುವ ಅವರ ವಿರುದ್ಧ ರಾಜ್ಯ ಗೃಹ ಇಲಾಖೆ ಕ್ರಮ ಕೈಗೊಳ್ಳಬೇಕು, ಪ್ರತಿಯೊಬ್ಬ ಮನುಷ್ಯನ ಆಹಾರ ಪದ್ದತಿ ಅವರ ಹಕ್ಕು ಅದರ ಬಗ್ಗೆ ಮಾತಾನಾಡಿರುವುದು ಸರಿಯಲ್ಲ, ಹಿಂದೂಗಳ ಮನಸ್ಸಿಗೆ ನೋವನಂಟು ಮಾಡಿ ಖಾಸಗಿ ವಾಹಿನಿಯಲ್ಲಿ ಮಹಾಗುರುಗಳು ಎಂದು ಸ್ವಯಂಕೃತ ಪದ ಬಳಸಬಾರದು? ಮುಂದಿನ ದಿನದಲ್ಲಿ ಕ್ಷಮೆ ಕೇಳದಿದ್ದಲ್ಲಿ ವಿಪ್ರ ಸಮಾಜದಿಂದ ಹಂಸಲೇಖರ ಮನೆ ಮುಂದೆ ಪ್ರತಿಭಟಿಸಲಾಗುವುದು ಎಂದು ಒತ್ತಾಯಿಸಿದರು.
ಇದೇ ಸಂದರ್ಭದಲ್ಲಿ ಪರಮಪೂಜ್ಯ ಇಳೈ ಆಳ್ವಾರ್ ಸ್ವಾಮೀಜಿ ,ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಡಿ ಟಿ ಪ್ರಕಾಶ್ ,ಬ್ರಾಹ್ಮಣ ಸಂಘದ ಗ್ರಾಮಾಂತರ ಅಧ್ಯಕ್ಷ ರಾದ ಗೋಪಾಲ್ ರಾವ್ , ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆ ಪ್ರಧಾನ ಕಾರ್ಯದರ್ಶಿ ವಿಕ್ರಂ ಅಯ್ಯಂಗಾರ್ ,ಅಜಯ್ ಶಾಸ್ತ್ರಿ ,ತುಳು ಶಿವಳ್ಳಿ ಮಾಧ್ವ ಬ್ರಾಹ್ಮಣ ಮಹಾಮಂಡಳದ ಗೌರವಾಧ್ಯಕ್ಷರಾದ ಎಂ ಕೆ ಪುರಾಣಿಕ್ ,ಅಧ್ಯಕ್ಷರು ರವಿಶಾಸ್ತ್ರಿ ,ಉಪಾಧ್ಯಕ್ಷರು ನಾಗೇಶ್ ,ಕಾರ್ಯದರ್ಶಿ ಸುಪ್ರಭಾ ,ವಿಪ್ರ ಜಾಗೃತಿ ವೇದಿಕೆಯ ರಮೇಶ್ ,ಮುಳ್ಳೂರು ಸುರೇಶ್ ,ಅರ್ಚಕರ ಸಂಘದ ಅಧ್ಯಕ್ಷರಾದ ಕೃಷ್ಣಮೂರ್ತಿ ,ರಾಕೇಶ್ ಭಟ್ ,ವಿಕಾಸ್ ಶಾಸ್ತ್ರಿ ,ವಿಜಯ್ ಕುಮಾರ್ ,ಪ್ರಶಾಂತ್ ,ಸುಚೀಂದ್ರ ,ಚಕ್ರಪಾಣಿ ,ನಟ ಬಾಲಕೃಷ್ಣ ,ನಾಗಶ್ರೀ ,ವಿಘ್ನೇಶ್ವರ್ ಭಟ್ ,ಸುದರ್ಶನ್ ,ಮಂಜುನಾಥ್ ,ಹಾಗೂ ಇನ್ನಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.