ಅರಣ್ಯ ರಕ್ಷಣೆಗೆ ಕರೆ ನೀಡಿದ ಡಿ ಬಾಸ್!
ಇಂದು ವಿಶ್ವ ಅರಣ್ಯ ದಿನದ ಅಂಗವಾಗಿ ಅರಣ್ಯ ಉಳಿಸಿ ಎಂದು ನಟ ತೂಗದೀಪ ದರ್ಶನ್ ಅವರು ಕರೆಕೊಟ್ಟಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿರುವ. ಡಿ ಬಾಸ್ ಕಾಡನ್ನು ರಕ್ಷಿಸಿ, ಕಾಡಿಲ್ಲದೆ ಈ ಭೂಮಿ ಇಲ್ಲ ಎಂದು ಬರೆದಿದ್ದಾರೆ.

ಈಗಾಗಲೇ ಅರಣ್ಯ ಇಲಾಖೆ ರಾಯಭಾರಿಯಾಗಿರುವ ನಟ ದರ್ಶನ್ ಅವರು ಪ್ರಾಣಿಗಳ ರಕ್ಷಣೆ ಹಾಗೂ ಅರಣ್ಯ ರಕ್ಷಣೆಗೆ ಸಾಕಷ್ಟು ನೆರವಾಗಿದ್ದಾರೆ. ಕರೋನಾ ವೇಳೆ ಬಂದ ದೊಡ್ಡ ಸಮಸ್ಯೆ ಎದುರಿಸಲು ಖುದ್ದು ಪ್ರಾಣಿ ಪ್ರಿಯರಿಗೆ ಮನವಿ ಮಾಡಿ ಕೋಟ್ಯಾಂತರ ರೂ ದೇಣಿಗೆ ತಂದು ಕೊಟ್ಟರು. ಇದೀಗಾ ಮತ್ತೇ ತಮ್ಮ ಅರಣ್ಯ ಪ್ರೀತಿ ಹಂಚಿಕೊಂಡು ಎಲ್ಲರಿಗು ರಕ್ಷಣೆ ಮಾಡುವ ಬಗ್ಗೆ ಮನವಿ ಮಾಡಿದ್ದಾರೆ.