ಕಾರ್ಯನಿರ್ವಾಹಕ ಸಂಪಾದಕರಾದ ಅಂಶಿ ಪ್ರಸನ್ನ ಕುಮಾರ್!
ಕಾರ್ಯನಿರ್ವಾಹಕ ಸಂಪಾದಕರಾದ ಅಂಶಿ ಸರ್
…
ಮೈಸೂರಿನ ಹಿರಿಯ ಪತ್ರಕರ್ತರಾದ ಅಂಶಿ ಪ್ರಸನ್ನಕುಮಾರ್ ಅವರು ‘ಕನ್ನಡಪ್ರಭ’ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕರಾಗಿ (ಎಕ್ಸಿಕ್ಯೂಟಿವ್ ಎಡಿಟರ್) ಬಡ್ತಿ ಪಡೆದಿದ್ದಾರೆ. ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಪತ್ರಿಕೆಗಳಲ್ಲಿ ಮೈಸೂರಿನಲ್ಲಿದ್ದುಕೊಂಡೆ ಈ ಹುದ್ದೆಗೆ ಏರಿದ ಮೊದಲಿಗರು ಎಂಬ ಹೆಗ್ಗಳಿಕೆ ಇವರದು.
ಎಂಭತ್ತರ ದಶಕದಲ್ಲಿ ಮೈಸೂರಿನಲ್ಲಿ ಪತ್ರಿಕೋದ್ಯಮ ಆರಂಭಿಸಿದ ಅಂಶಿ ಅವರು ’ಆಂದೋಲನ’ ಪತ್ರಿಕೆಯ ಮೂಲಕ ಪ್ರಸಿದ್ಧಿಗೆ ಬಂದವರು. ಕಳೆದ 27 ವರ್ಷಗಳಿಂದ ’ಕನ್ನಡಪ್ರಭ’ ಮೈಸೂರು ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅಂಶಿ ಸರ್ ಅವರಿಗೆ ನನ್ನೂರು ಮೈಸೂರು ಪರವಾಗಿ ಶುಭಾಷಯಗಳು.