ಇಂದಿನಿಂದ ಅಪ್ಪು ಸಮಾಧಿ ನೋಡಲು ಅಭಿಮಾನಿಗಳಿಗೆ ಅವಕಾಶ!
ಅಪ್ಪು ಸಮಾಧಿಗೆ ನಾವು ಕೂಡ ಒಮ್ಮೆ ಕೈ ಮುಗಿದು ಬರಬೇಕೆಂದು ಅದೆಷ್ಟೋ ಅಭಿಮಾನಿಗಳು ಕಾತರತೆಯಿಂದ ಕಾಯುತ್ತಿದ್ದಾರೆ. ಇಂತಹ ಅಭಿಮಾನಿಗಳಿಗೆ ಗುಡ್ ನ್ಯೂಸ್ ಸಿಕ್ಕಿದ್ದು ಇಂದು ಬೆಳಗಿನಿಂದ ಅಭಿಮಾನಿಗಳಿಗೆ ಕಂಠೀರವ ಸ್ಟುಡಿಯೋದಲ್ಲಿರುವ ಅಪ್ಪು ಸಮಾಧಿ ಕಾಣುವ ಅವಕಾಶ ಕಲ್ಪಿಸಲಾಗಿದೆ.

ಈಗಾಗಲೇ ಕುಟುಂಬಸ್ಥರು ಹಾಲು ತುಪ್ಪ ಬಿಡುವ ಕಾರ್ಯ ಮುಗಿಸಿದ್ದು ಯಾವುದೇ ವಿಘ್ನಗಳಿಲ್ಲದೆ ನಿರ್ವಿಘ್ನವಾಗಿ ಎಲ್ಲ ಕಾರ್ಯ ನೆರವೇರಿದೆ. ಆದರೆ ಈ ಕಾರ್ಯಕ್ರಮ ಮುಗಿಯುವ ವರೆಗು ಹೊರಗಿನವರಿಗೆ ಹಾಗೂ ಅಭಿಮಾನಿಗಳಿಗೆ ಅಪ್ಪು ಸಮಾಧಿಯ ದರ್ಶನಕ್ಕೆ ಬ್ರೇಕ್ ಹಾಕಲಾಗಿತ್ತು. ಆದರೆ ಈಗ ಎಲ್ಲ ಕಾರ್ಯ ಮುಗಿದಿದ್ದು ಇಂದು ಬೆಳಗ್ಗೆ 9 ಗಂಟೆಯಿಂದಲೇ ಅಭಿಮಾನಿಗಳಿಗೆ ಹಾಗೂ ಸಾರ್ವಜನಿಕರಿಗೆ ಅಪ್ಪು ಸಮಾಧಿಗೆ ನಮಸ್ಕರಿಸುವ ಹಾಗೂ ಅದನ್ನ ಕಾಣುವ ಅವಕಾಶ ಕಲ್ಪಿಸಲಾಗಿದೆ. ಇದರಿಂದ ಅಪ್ಪು ಫ್ಯಾನ್ಸ್ ಸಖತ್ ಖುಷಿಯಾಗಿದ್ದು ಅಪ್ಪು ಅಮರ ಎನ್ನುತ್ತಿದ್ದಾರೆ.