ಪ್ರಧಾನಿ ಮೋದಿಗೆ ಸುಭಾಷ್ ಚಂದ್ರ ಬೋಸ್ ಪುತ್ಥಳಿ ನೀಡಿದ ಮೈಸೂರಿನ ಅರುಣ್!
ಮೈಸೂರಿನ ಅರುಣ್ ಯೋಗಿರಾಜ್ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಗುರ್ತಿಸಿಕೊಂಡಿರುವ ಶಿಲ್ಪಿ ಅರುಣ್ ಯೋಗಿರಾಜ್‌ರನ್ನ ಇಂದು ಪ್ರಧಾನಿ ನರೇಂದ್ರ ಮೋದಿ ಅವರು ಭೇಟಿಯಾಗಿದ್ದಾರೆ. ಈ ವೇಳೆ ಮೋದಿ ಅವರಿಗೆ ಅರುಣ್ ಯೋಗಿರಾಜ್ ಅವರು ಸುಭಾಷ್ ಚಂದ್ರ ಬೋಸ್ ಪ್ರತಿಮೆಯನ್ನ ಉಡುಗೊರೆಯಾಗಿ ನೀಡಿದ್ದಾರೆ. ಇದಕ್ಕು ಮುನ್ನ ಸಂಸದ ಪ್ರತಾಪ್ ಸಿಂಹ ಅವರು ಕೂಡ ಸುಭಾಷ್ ಚಂದ್ರ ಬೋಸ್‌ರ ಪ್ರತಿಮೆ ಹಿಡಿದು ಸಂತಸ ವ್ಯಕ್ತಪಡಿಸಿದ್ದಾರೆ.

ವಿಶೇಷ ಅಂದ್ರೆ ಈ ಹಿಂದೆ ಕೇದಾರನಾಥದಲ್ಲಿ ಪ್ರತಿಷ್ಠಾಪಿಸಲಾಗಿರುವ ಶಂಕರಾಚಾರ್ಯರ ಪ್ರತಿಮೆಯನ್ನ ಶಿಲ್ಪಿ ಯೋಗಿರಾಜ್ ನಿರ್ಮಿಸಿದ್ದರು. ಆದರೆ ಅಂದು ಖಾಸಗಿ ಸಮಸ್ಯೆ ಕಾರಣ ಮೋದಿ ಅವರು ಯೋಗಿರಾಜ್‌ರನ್ನ ಮುಖಾಮುಖಿ ಭೇಟಿಯಾಗಲು ಆಗಲಿಲ್ಲ.

ಇನ್ನು ಅರುಣ್ ಯೋಗಿರಾಜ್ ಅವರ ಬಗ್ಗೆ ಸ್ವತಃ ಟ್ವೀಟ್ ಮಾಡಿ ಪ್ರಧಾನಿ ನರೇಂದ್ರ ಮೋದಿ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.