ಪ್ಲಾಸ್ಟಿಕ್ ಬ್ಯಾಗ್ ತ್ಯಜಿಸಿ ಪೇಪರ್ ಬ್ಯಾಗ್ ಬಳಸಿ ಅರಿವು ಕಾರ್ಯಕ್ರಮ
ಮೈಸೂರು,ಸೆ.21-ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮ ದಿನದ ಅಂಗವಾಗಿ ಪ್ಲ್ಯಾಸ್ಟಿಕ್ ಬ್ಯಾಗ್ ತ್ಯಜಿಸಿ ಪೇಪರ್ ಬ್ಯಾಗ್ ಬಳಸಿ ಎಂದು ಉಚಿತವಾಗಿ ಪೇಪರ್ ಬ್ಯಾಗ್ ಗಳನ್ನು ಕೊಡುವ ಮುಖಾಂತರ ಅರಿವು ಮೂಡಿಸಲಾಯಿತು.
ನಗರ ಬಿಜೆಪಿ ಯುವಮೋರ್ಚಾ ವತಿಯಿಂದ ನಗರದ ಚಿಕ್ಕ ಗಡಿಯಾರ ಮಾರುಕಟ್ಟೆಯಲ್ಲಿ ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ನಗರ ಬಿಜೆಪಿ ಅಧ್ಯಕ್ಷ ಟಿ.ಎಸ್ ಶ್ರೀವತ್ಸ, ನಗರ ವಕ್ತಾರ ಮಹೇಶ್, ಯುವಮೋರ್ಚಾ ಅಧ್ಯಕ್ಷ ಎಂ. ಜೆ.ಕಿರಣ್ ಗೌಡ, ರಾಜ್ಯ ಯುವ ಮೋರ್ಚಾ ಉಪಾಧ್ಯಕ್ಷರುಗಳಾದ ಧೀರಜ್ ಪ್ರಸಾದ್, ಜೈಶಂಕರ್, ನಗರ ಉಪಾಧ್ಯಕ್ಷರು ಹಾಗೂ ಉಸ್ತುವಾರಿಗಳಾದ ರಮೇಶ್, ನಗರ ಪ್ರಧಾನ ಕಾರ್ಯದರ್ಶಿಗಳಾದ ಗಿರಿಧರ್, ವಾಣಿಶ್ ನಗರ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಭರತ್,
ನರಸಿಂಹರಾಜ ವಿಧಾನಸಭಾ ಕ್ಷೇತ್ರ ಯುವಮೋರ್ಚಾ ಅಧ್ಯಕ್ಷ ಡಿ.ಲೋಹಿತ್, ಚಾಮುಂಡೇಶ್ವರಿ ಮೋರ್ಚಾ ಅಧ್ಯಕ್ಷ ಮಧು, ಹರ್ಷ ಸಚಿನ್, ಅರ್ಜುನ್, ಪ್ರಜ್ವಲ್ ಉಪಸ್ಥಿತರಿದ್ದರು.