ಸಿದ್ದಗಂಗಾ ಮಠಕ್ಕೆ ಡಾಲಿ ಧನಂಜಯ ಭೇಟಿ!
Tumkuru : ಬಡವ ರಾಸ್ಕಲ್ ಚಿತ್ರ ಅಂದುಕೊಂಡಿದ್ದಕ್ಕಿಂತ ಬಹುದೊಡ್ಡ ಪ್ರಮಾಣದಲ್ಲಿ ಹಿಟ್ ಆಗಿದೆ. ಇದರ ಕ್ರೆಡಿಟ್ ಖಂಡಿತವಾಗಿಯು ಅಭಿಮಾನಿಗಳದ್ದು ಹಾಗೂ ಬಡವನ ಟೀಂನ ಪರಿಶ್ರಮವು ಎರಡು ಸೇರಿ ಸಿನಿಮಾ ಸೂಪರ್ ಡೂಪರ್ ಹಿಟ್ ಆಗಿದೆ. ಒಬ್ಬ ಸಾಮಾನ್ಯ ಬಡ ಕುಟುಂಬದ ಎಳೆಯನ್ನು ಇಟ್ಟುಕೊಂಡು ಅದ್ದೂರಿತನದಲ್ಲಿ ಸ್ಕ್ರೀನ್ ಪ್ಲೇ ಡೈರೆಕ್ಷನ್ ಜೊತೆಗೆ ಮೂಡಿಬಂದ ಚಿತ್ರಕ್ಕೆ ಪ್ರೇಕ್ಷಕ ಜೈ ಎಂದಿದ್ದಾನೆ.

ಇದೇ ಗೆಲುವಿನ ಖುಷಿಯಲ್ಲಿರುವ ನಟ ಡಾಲಿ ಧನಂಜಯ ರಾಜ್ಯ ಸುತ್ತುತ್ತಿದ್ದು, ಹೋದಲೆಲ್ಲ ಭರ್ಜರಿ ರೆಸ್ಪಾನ್ಸ್ ಜೊತೆಗೆ ಅದ್ದೂರಿ ಸ್ವಾಗತ ಸಹ ಸಿಕ್ತಿದೆ. ಇದರಿಂದ ಮನಸೋತ ಡಾಲಿ ಧನಂಜಯ ಮೂಕ ಪ್ರೇಕ್ಷಕನಾಗಿದ್ದಾರೆ. ಅಭಿಮಾನಿಗಳ ಸಂತಸ, ನೂರ್ಮಡಿ ದಾಟ್ಟಿದ್ದು ಡಾಲಿ ಮೇಲೆ ಹೊಸ ನಂಬಿಕೆ ಹುಟ್ಟಿದೆ. ಒಬ್ಬ. ಸಾಧಾರಣ ನಟ ಏನೆಲ್ಲ ಮಾಡಬಹುದು ಎಂಬುದನ್ನ ಒಬ್ಬ ಮೈಸೂರಿನ ಯುವಕ ಇವತ್ತು ಒಂದು ಚಿತ್ರರಂಗಕ್ಕೆ ತೋರಿಸುವ ಮಟ್ಟಕ್ಕೆ ಡಾಲಿ ಬಂದಿದ್ದಾರೆ.

ವಿಶೇಷ ಅಂದ್ರೆ ಅಂದು ಕನಸ್ಸು ಕಂಡಿದ್ದ ಧನಂಜಯ ಇವತ್ತು ಆ ಕನಸನ್ನು ನನಸು ಮಾಡಿದ್ದು ಮುಂದಿನ ಚಿತ್ರಗಳ ಮೇಲೆ ಭಾರೀ ನಿರೀಕ್ಷೆ ಹುಟ್ಟಿಸಿದೆ. ಇದರ ಬೆನ್ನಲ್ಲೆ ಡಾಲಿ ನೆಚ್ಚಿನ ಸ್ಥಳವಾದ ತುಮಕೂರಿನ ಶ್ರಿ ಸಿದ್ದಗಂಗಾ ಮಠಕ್ಕೆ ಭೇಟಿ ಕೊಟ್ಟು ಶತಾಯುಷಿ, ಪರಮಪೂಜ್ಯ ಶ್ರೀ ಶಿವಕುಮಾರ ಮಹಾಸ್ವಾಮೀಜಿ ಗಳವರ ಆಶೀರ್ವಾದ ಪಡೆದುಕೊಂಡಿದ್ದಾರೆ. ಈ ವೇಳೆ ಡಾಲಿಗೆ ಇಲ್ಲು ಸಹ ದೊಡ್ಡ ಮಟ್ಟದ ಸ್ವಾಗತ ಸಿಕ್ಕಿದ್ದು ಶ್ರೀಗಳ ಫೋಟೋ ನೀಡಿ ಮಠದ ವತಿಯಿಂದ ಆಶೀರ್ವಾದ ನೀಡಲಾಯಿತು.