ಭಗತ್ ಸಿಂಗ್ ಜನ್ಮಜಯಂತಿ: ಪ್ರತಿಮೆಗೆ ಮಾಲಾರ್ಪಣೆ, ಗೌರವ ನಮನ
ಮೈಸೂರು,ಸೆ.27-ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್
ಜನ್ಮಜಯಂತಿ ಅಂಗವಾಗಿ ಮುಡಾ ಸದಸ್ಯ ನವೀನ್ ಕುಮಾರ್
ಅವರು ಸ್ವಾತಂತ್ರ್ಯ ಹೋರಾಟಗಾರರ ಉದ್ಯಾನವನದಲ್ಲಿರುವ
ಭಗತ್ ಸಿಂಗ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ
ಗೌರವ ಸಮರ್ಪಿಸಿದರು.
ಬಳಿಕ ಮಾತನಾಡಿದ ಅವರು, ಭಗತ್ ಸಿಂಗ್ ಅವರ
ಹೆಸರು ಶೌರ್ಯ ಮತ್ತು ತ್ಯಾಗದ ಪ್ರತೀಕ. ಇವರ ಧೈರ್ಯ
ಇಂದಿಗೂ ಲಕ್ಷಾಂತರ ಯುವ ಜನತೆಗೆ ಸ್ಫೂರ್ತಿ ಎಂದರು.
ಬಿಜೆಪಿ ನಗರ ಉಪಾಧ್ಯಕ್ಷರ ಹರ್ಷ, ರಾಜೇಂದ್ರ, ಶ್ರೀನಿವಾಸ್, ವಿಶ್ಲೇಶ್ವರ್ ಭಟ್ ಇತರರು ಉಪಸ್ಥಿತರಿದ್ದರು.