ಸೈಕಲ್ ಪ್ಯೂರ್ ಅಗರಬತ್ತಿಯಿಂದ ಚಾಮುಂಡಿ ಬೆಟ್ಟಕ್ಕೆ ಬೊಲೆರೋ ವಾಹನ ಕೊಡುಗೆ
ಮೈಸೂರು,ಅ.21-ಸೈಕಲ್ ಪ್ಯೂರ್ ಅಗರಬತ್ತಿ ಸಂಸ್ಥೆಯವರು ಇಂದು ಚಾಮುಂಡಿ ಬೆಟ್ಟದ ದೇವಸ್ಥಾನಕ್ಕೆ ಬೊಲೆರೋ ವಾಹನವನ್ನು ಕೊಡುಗೆ ನೀಡಿದರು.
ದೇವಸ್ಥಾನದ ಮುಂಭಾಗ ವಾಹನದ ಕೀಯನ್ನು ಸೈಕಲ್ ಪ್ಯೂರ್ ಅಗರಬತಿ ಅಧ್ಯಕ್ಷ ಗುರು ಅವರು ಹೆಚ್ಚುವರಿ ಡಿಸಿ ಡಾ.ಮಂಜುನಾಥ ಸ್ವಾಮಿ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಯತಿರಾಜ್ ಅವರಿಗೆ ಹಸ್ತಾಂತರಿಸಿದರು.
ಚಾಮುಂಡೇಶ್ವರಿ ದೇವಿಯ ಸೇವೆಗಾಗಿ ಈ ವಾಹನವನ್ನು ಬಳಸಲಾಗುವುದು.