ವರ್ಷದ ಮೊದಲ ಮಳೆಯಲ್ಲೇ ಹೊತ್ತಿ ಉರಿದ ಮರ…
ಹೆಚ್.ಡಿ ಕೋಟೆ:
ವರ್ಷಾರಂಭದ ಮೊದಲ ಮಳೆಯಿಂದ ಎಚ್.ಡಿ.ಕೋಟೆ ತಾಲ್ಲೂಕಿನಲ್ಲಿ ಅವಘಡ ಸೃಷ್ಟಿಯಾಗಿದ್ದು, ಸಿಡಿಲಿನ ಬಡಿತಕ್ಕೆ ಸಿಲುಕಿ ಮರ. ಹೊತ್ತಿ ಉರಿದ ಘಟನೆ ವರದಿಯಾಗಿದೆ.
ಎಚ್.ಡಿ.ಕೋಟೆ ತಾಲ್ಲೂಕಿನ ಹುಲ್ಲೇಮಾಳದಲ್ಲಿ ಸಿಡಿಲಿಗೆ ಮರ ಹೊತ್ತಿ ಉರಿದಿದ್ದು, ಈ ದೃಶ್ಯ ಕಂಡು ಗ್ರಾಮಸ್ತರು ಭಯಭೀತರಾಗಿದ್ದರು. ಸತತ ಒಂದು ತಾಸಿಗೂ ಅಧಿಕಕಾಲ ಮುಂಗಾರು ಮಳೆ ಸುರಿದಿದೆ.
ಅಧಿಕ ಮಳೆಯ ಪರಿಣಾಮ ಎಚ್.ಡಿ.ಕೋಟೆ ತಾಲ್ಲೂಕಿನ ಕರಿಗಳ ಸಮೀಪ ಆಂಜನೇಯ ದೇ ವಸ್ಥಾನದ ಬಳಿ ಮೈಸೂರು ಮಾನಂದವಾಡಿ ರಾಜ್ಯ ಹೆದ್ದಾರಿಯಲ್ಲಿನ ಮಧ್ಯದಲ್ಲಿ ರಸ್ತೆಗೆ ಅಡ್ಡಲಾಗಿ ಮರವೊಂದು ಉರುಳಿ ಬಿದ್ದಿದ್ದು, ವಾಹನ ಸಂಚಾರಕ್ಕೆ ಅಡಚಣೆ ಉಂಟಾದ ಕಾರಣ ಬದಲಿ ಮಾರ್ಗದಲ್ಲಿ ವಾಹನಗಳು ಸಂಚರಿಸಿದವು.