ಅ. 19ರಂದು ಚಾಮುಂಡೇಶ್ವರಿ ರಥೋತ್ಸವ: ಬೆಟ್ಟಕ್ಕೆ ಸಾರ್ವಜನಿಕರ ಪ್ರವೇಶ ನಿರ್ಬಂಧ
ಮೈಸೂರು: ಅ. 19ರಂದು ಚಾಮುಂಡೇಶ್ವರಿ ಅಮ್ಮನವರ ರಥೋತ್ಸವ ಹಿನ್ನಲೆ ಚಾಮುಂಡಿ ಬೆಟ್ಟಕ್ಕೆ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿದೆ.
ಚಾಮುಂಡೇಶ್ವರಿ ಅಮ್ಮನವರ ರಥೋತ್ಸವ ಇರುವ ಕಾರಣ 19/10/2021ರ ಮಂಗಳವಾರ ಸಾರ್ವಜನಿಕರಿಗೆ ಬೆಳಗ್ಗೆ 4 ಗಂಟೆಯಿಂದ 10 ಗಂಟೆಯವರೆಗು ಹಾಗೂ ವಾಹನಗಳು ಸೇರಿ ಭಕ್ತರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ. ಇನ್ನು ಬೆಳಗ್ಗೆ 7.18 ರಿಂದ 7.40ರೊಳಗೆ ಸಾಂಪ್ರದಾಯಿಕವಾಗಿ ಪೂಜೆ ನೆರವೇರಲಿದ್ದಯ ಸರಳವಾಗಿ ಪೂಜೆ ನೆರವೇರಿಕೆ ನಡೆಸಲು ಸಿದ್ದತೆ ನಡೆದಿದೆ. ಡಿಸಿ ಡಾ.ಬಗಾದಿ ಗೌತಮ್ ಅವರ ಆದೇಶದಂತೆ ಕ್ರಮ ಕೈಗೊಳ್ಳಲಾಗಿದೆ.
