ಮೈಸೂರಿನ ಕವಲಂದೆಯಲ್ಲಿ ‘ಚೋಟಾ ಪಾಕಿಸ್ಥಾನ’ ಉಲ್ಲೇಖ!?
ನಂಜನಗೂಡು: ಕವಲಂದೆ ಬೋಲೇ ತೋ ಚೋಟಾ ಪಾಕಿಸ್ತಾನ್ ಠೀಕ್ ಹೈ ಎಂಬ ವಿಡಿಯೋ ಮೇಲೆ ರೆಕಾರ್ಡ್ ಆದ ಆಡಿಯೋ ಇದೀಗ ವೈರಲ್ ಆಗಿದೆ.
ನಂಜನಗೂಡು ತಾಲೂಕಿನ ದೊಡ್ಡಕವಲಂದೆಯಲ್ಲಿ ಘಟನೆ ನಡೆದಿದೆ. ರಂಜಾನ್ ಹಬ್ಬದ ಪ್ರಯುಕ್ತ ಸಾಮೂಹಿಕ ಪ್ರಾರ್ಥನೆ ನೆರವೇರಿಸಿದ ಬಳಿಕ ಘಟನೆ ನಡೆದಿದೆ.
ಮುಸ್ಲಿಂ ಬಾಂಧವರು ಮನೆಗಳಿಗೆ ಹಿಂದಿರುಗುವ ವೇಳೆ ಮೊಬೈಲ್ ವಿಡಿಯೋಗೆ ಫೋಸ್ ಕೊಟ್ಟಿದ್ದಾರೆ. ವಿಡಿಯೋ ಚಿತ್ರೀಕರಿಸಿದ ವ್ಯಕ್ತಿ ಶಕ್ತಿ ಪ್ರದರ್ಶನದಂತೆ ಬಣ್ಣಿಸಿದ್ದಾನೆ. ಕವಲಂದೆ ಎಂದರೆ ಚೋಟಾ ಪಾಕಿಸ್ತಾನ್ ಎಂಬಂತೆ ಹೇಳಿಕೆ. ವಿವಾದ ಹುಟ್ಟಿಸುವಂತಹ ಆಡಿಯೋ ವಿಡಿಯೋ ಮೇಲೆ ರೆಕಾರ್ಡ್.