ಮೈಸೂರಿನಲ್ಲಿ ಅಚ್ಚರಿ’ ತೆಂಗಿನ ಕಾಯಿಯಲ್ಲಿ ಅರಳಿದ ಬಸವ!
MYSURU : ತೆಂಗಿನಕಾಯಿಯಲ್ಲಿ ಅರಳಿದ ಬಸವನನ್ನು ಕಂಡ ಮೈಸೂರಿನ ಹಿನಕಲ್ ಜನರು ತೆಂಗಿನಕಾಯಿಗೆ ವಿಶೇಷ ಪೂಜೆ ಸಲ್ಲಿಕೆ ಮಾಡಿದ್ದಾರೆ. ಹಿನಕಲ್ನ ನನ್ನೇಶ್ವರ ದೇವಸ್ಥಾನದಲ್ಲಿ ಈ ಅಚ್ಚರಿ ಕಂಡು ಬಂದಿದ್ದು ತೆಂಗಿನಕಾಯಿಯನ್ನು ಈಶ್ವರನ ಮುಂದಿಟ್ಟು ಜನರು ಪೂಜೆ ಸಲ್ಲಿಕೆ ಮಾಡುತ್ತಿದ್ದಾರೆ.

ಹೂ, ಕುಂಕುಮ ಹಚ್ಚಿ ಪೂಜೆ ಸಲ್ಲಿಸಿದ ಗ್ರಾಮಸ್ಥರು, ಸುಲಿದ ತೆಂಗಿನಕಾಯಿ ಮೊಳಕೆ ಹೊಡೆದು ಬಸವನ ಮೂತಿಯ ರೂಪ ಪಡೆದಿದೆ. ಮುಖ ಹಾಗೂ ಕೊಂಬುಗಳ ರೂಪ ಬಂದಿರೋದು ಕಂಡು ಅದನ್ನೇ ಬಸವ ದೇವರ ಸ್ವರೂಪವೆಂದು ಪೂಜೆ ಸಲ್ಲಿಕೆ ಮಾಡಿದ್ದಾರೆ.