ಮೈಸೂರಿನಲ್ಲಿ ಗ್ರಾಮೀಣ ಕ್ರೀಡೆಯ ಸೊಬಗು!
ಮೈಸೂರು : ಲಯನ್ಸ್ ಕ್ಲಬ್ ಜೆಪಿ ನಗರ, SMP ಫೌಂಡೇಶನ್ ಹಾಗೂ ಅರಿವಿನ ಮನೆ ಮತ್ತು ಮನ್ವಂತರ ಬಳಗದ ವತಿಯಿಂದ 20ಕ್ಕು ಹೆಚ್ಚು ಗ್ರಾಮೀಣ ಕ್ರೀಡೆಯನ್ನ ಆಯೋಜಿಸಲಾಗಿತ್ತು. ಎರಡು ದಿನಗಳ ಕಾರ್ಯಕ್ರಮಕ್ಕೆ ದೀಪ ಬೆಳಗಿಸುವ ಮೂಲಕ ಎಸ್.ಎಂ ಶಿವಪ್ರಕಾಶ್ ಸೇರಿ ವಿದ್ಯಾರಣ್ಯಪುರಂ ಇನ್ಸ್ಪೆಕ್ಟರ್ ರಾಜು ಅವರು ಚಾಲನೆ ನೀಡಿದ್ರು.

ಬಳಿಕ ಮಾತನಾಡಿದ ಗಣ್ಯರು ಹಿಂದಿನ ಕಾಲದ ಕ್ರೀಡೆಯನ್ನ ಮಕ್ಕಳು ಮರೆತಿದ್ದಾರೆ. ಇದನ್ನ ಬಿಟ್ಟು ಮೊಬೈಲ್ ಬಗ್ಗೆ ಹೆಚ್ಚಾಗಿ ಬಳಕೆ ಮಾಡುತ್ತಿದ್ದಾರೆ. ಮಕ್ಕಳು ಇಂತಹ ಕ್ರೀಡೆಗಳ ಬಗ್ಗೆ ಹೆಚ್ಚು ಗಮನ ಕೊಟ್ಟರೆ ಅವರ ಶಾರೀರಿಕ ಹಾಗೂ ಭೌತಿಕ ಬುದ್ಧಿ ಮಟ್ಟ ಮತ್ತಷ್ಟು ಹೆಚ್ಚಲಿದೆ ಎಂದರು.

ಕಾರ್ಯಕ್ರಮದ ಬಳಿಕ ಗ್ರಾಮೀಣ ಕ್ರೀಡೆಗಳಿಗೆ ಚಾಲನೆ ಸಿಕ್ಕು ಮಕ್ಕಳು, ಪೋಷಕರು ಹಾಗೂ ಹಿರಿಯರು ದೇಶಿಯ ಕ್ರೀಡೆಯಲ್ಲಿ ಭಾಗಿಯಾದರು. ಮಾತ್ರವಲ್ಲದೆ ಗ್ರಾಮೀಣ ಕ್ರೀಡೆಯ ಸೊಬಗನ್ನ ಆನಂದಿಸಿದರು. ಇಂದು ಸಹ ಕ್ರೀಡೆ ಮುಂದುವರೆಯಲಿದ್ದು ಮಕ್ಕಳ ಕೈನಲ್ಲಿರುವ ಮೊಬೈಲ್ ಕಸಿದು ಪೋಷಕರು ಈ ಆಟದಲ್ಲಿ ತೊಡಗಿಸಬೇಕಿದೆ