ಮೈಸೂರು ಮೃಗಾಲಯದ ಡೆಂಬಾಗೆ ಹುಟ್ಟುಹಬ್ಬದ ಖುಷಿ!
ಮೈಸೂರು ಮೃಗಾಲಯದಲ್ಲಿಂದು ವಿಶೇಷ ದಿನವಾಗಿದ್ದು, ಡೆಂಬಾಗೆ ಮೃಗಾಲಯದಲ್ಲಿ ಹುಟ್ಟುಹಬ್ಬದ ಸಂಭ್ರಮ ಮನೆ ಮಾಡಿದೆ. ಈ ವಿಶೇಷ ಸಂದರ್ಭಕ್ಕೆ ಸಾಕ್ಷಿಯಾದ ಮೈಸೂರು ಚಾಮರಾಜೇಂದ್ರ ಮೃಗಾಲಯದ ಹೊಸ ಅತಿಥಿ ಡೆಂಬಾಗೆ ಇಂದು ಜನ್ಮದಿನದ ಖುಷಿಯಾಗಿದೆ.

ಇತ್ತಿಚೆಗೆ ಮೈಸೂರು ಮೃಗಾಲಯಕ್ಕೆ ಆಗಮಿಸಿದ್ದ ಡೆಂಬಾ ಹೆಸರಿನ ಗೊರಿಲ್ಲಾಗಾಗಿ ಮೃಗಾಲಯದ ಸಿಬ್ಬಂದಿಗಳಿಂದ ವಿಶೇಷ ಆತಿಥ್ಯ ವಹಿಸಿದ್ದು, ವಿಶೇಷ ತಿನಿಸುಗಳು ಮೂಲಕ ಡೆಂಬಾಗೆ ಶುಭಾಶಯ ಕೋರಿದ್ದಾರೆ. Happy birthday ಡೆಂಬಾ ಎಂದು ಬರೆದು ವಿಶೇಷ ತಿನಿಸು ಇಡಲಾಗಿತ್ತು. ಈ ವೇಳೆ ಡೆಂಬಾ ಆ ತಿನಿಸು ತಿಂದು ಸಂತಸ ಪಟ್ಟಿದ್ದಾನೆ.