ಲೋನ್ ಆ್ಯಪ್ ನವರಿಂದ ಕಿರುಕುಳ: ಯುವಕ ಆತ್ಮಹತ್ಯೆ
ಮಂಗಳೂರು,ಜ.13-ಆನ್ಲೈನ್ ಲೋನ್ ಆ್ಯಪ್ ನವರ ಕಿರುಕುಳದಿಂದ ಬೇಸತ್ತ ಯುವಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸುರತ್ಕಲ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಸುಶಾಂತ ಕುಮಾರ್ (26) ಆತ್ಮಹತ್ಯೆ ಮಾಡಿಕೊಂಡಿರುವ ಯುವಕ. ಡೆತ್ ನೋಟ್ ನಲ್ಲಿ ಆನ್ ಲೈನ್ ಲೋನ್ ಆ್ಯಪ್ ಮೂಲಕ ಸಾಕಷ್ಟು ಸಾಲ ಮಾಡಿದ್ದು, ಅವರ ಕಿರುಕುಳ ತಡೆಯಲಾರದೆ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಬರೆದಿದ್ದಾನೆ.
ಈ ಬಗ್ಗೆ ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದೀಗ ಸಾರ್ವಜನಿಕರು ಅಂತಹ ಆ್ಯಪ್ ಗಳ ಬಗ್ಗೆ ಜಾಗರೂಕರಾಗಿರಬೇಕೆಂದು ಪೊಲೀಸರು ಎಚ್ಚರಿಸಿದ್ದಾರೆ.