ಮೇಕೆದಾಟು ಯೋಜನೆ ರಾಜಕೀಯ ದಾಹವನ್ನಲ್ಲ,,, ರೈತರ, ಬೆಂಗಳೂರು ಜನರ ದಾಹ ಇಂಗಿಸಲಿ
ಮೈಸೂರು: ಮೇಕೆದಾಟು ಯೋಜನೆ ಜಾರಿಗಾಗಿ ಕಾಂಗ್ರೆಸ್ ಕೈಗೊಂಡಿರುವ ಪಾದಯಾತ್ರೆ ಸ್ವಾರ್ಥ ರಹಿತವಾಗಿದ್ದರೆ ಅದನ್ನು ಜೆಡಿಎಸ್ ಸದಾ ಬೆಂಬಲಿಸುತ್ತದೆ ಅಂತ ಮೈಸೂರು ಮಹಾನಗರ ಪಾಲಿಕೆಯ ಮಾಜಿ ಸದಸ್ಯರು, ಜೆಡಿಎಸ್ ಮುಖಂಡ ಕೆವಿ ಮಲ್ಲೇಶ್ ಹೇಳಿದ್ದಾರೆ.
ಅಂತೆಯೇ, ರಾಜ್ಯ ಬಿಜೆಪಿ ಸರಕಾರ ಈ ಬಗ್ಗೆ ತತ್‌ಕ್ಷಣ ಕ್ರಮ ಕೈಗೊಂಡು ಯೋಜನೆ ಜಾರಿಗೆ ಮುಂದಾಗಬೇಕು ಎಂದು ಆಗ್ರಹಿಸುತ್ತೇನೆ. ನಮ್ಮವರೇ ನಮಗೆ ಆಗಲಿಲ್ಲ ಎಂದ ಮೇಲೆ ನೆರೆಹೊರೆಯವರು ಆಗುತ್ತಾರ. ಈ ಮಾತು ಮೇಕೆದಾಟು ಯೋಜನೆ ಅನುಷ್ಠಾನದಲ್ಲಿ ಅನ್ವಯವಾಗುತ್ತದೆ. ಕೇಂದ್ರ ಸರಕಾರ ರಚನೆಗೊಳ್ಳಲು ೨೬ ಸಂಸದರನ್ನು ರಾಜ್ಯದಿಂದ ಆಯ್ಕೆ ಮಾಡಿಕಳುಹಿಸಿರುವ ಈ ಭಾಗದ ಜನರ ಋಣ ರೀತಿಸಲು, ಜನರಿಗೆ ಭ್ರಮಾ ನಿರಸನ ಮಾಡದೆ ಕೇಂದ್ರ ಸರಕಾರ ರೈತರ ಹಾಗೂ ಬೃಹತ್ ಬೆಂಗಳೂರು ನಗರದ ಜನರ ಕುಡಿಯುವ ನೀರಿನ ಸಮಸ್ಯೆಗೆ ಮುಕ್ತಿಯಾಡಿ ಮೇಕೆದಾಟು ಯೋಜನೆಗೆ ಶೀಘ್ರವೇ ಹಸಿರು ನಿಶಾನೆ ತೋರಬೇಕು.

– ಪ್ರಧಾನಿಯವರು ಕೂಡಲೇ ಮಧ್ಯ ಪ್ರವೇಶಿಸಿ ಯೋಜನೆ ಜಾರಿಗೆ ಕ್ರಮ ವಹಿಸಬೇಕು. ಹಾಗೂ ಅವರೇ ಮುಂದೆ ನಿಂತು ಶಂಕುಸ್ಥಾಪನೆ ಮಾಡಲಿ ಎಂಬುದು ನಮ್ಮ ಆಗ್ರಹ.
ಕಾಂಗ್ರೆಸ್ ಸರಕಾರ ಶತಾಯಗತಾಯ ಅಧಿಕಾರ ಹಿಡಿಯುವ ನಿಟ್ಟಿನಲ್ಲಿ ಈ ಹೋರಾಟ ರೂಪಿಸಿದೆ ಎಂಬುದು ಗುಟ್ಟಾಗಿ ಉಳಿದಿಲ್ಲ. ಆದರೆ, ಈ ಮೂಲಕವಾದರೂ ಕಾಂಗ್ರೆಸ್ ನನ್ನ ಅಧಿಕಾರಾವಧಿಯಲ್ಲಿ ಮಾಡಿದ ತಪ್ಪನ್ನು ಸರಿಪಡಿಸುವ ನಿಟ್ಟಿನಲ್ಲಿ ಹೋರಾಟ ರೂಪಿಸುತ್ತಿರುವುದಕ್ಕೆ ಅವರಿಗೆ ಧನ್ಯವಾದ.
ಈ ಎರಡು ರಾಷ್ಟ್ರೀಯ ಪಕ್ಷಗಳು ರಾಜ್ಯಕ್ಕೆ ಸದಾ “ತಾನು ತಿಂದು ಮೇಕೆ ಮೂತಿಗೆ ಒರೆಸಿದ” ಎಂಬ ಮಾತಿನಂತೆ ತಾವು ಕೇಂದ್ರದಲ್ಲಿ ಅಧಿಕಾರ ಹಿಡಿಯಲು ಸಂಸದರನ್ನು ಗೆಲ್ಲಿಸಿ ಕಳುಹಿಸಿ ಎಂದು ಹೇಳಿ ಕೊನೆಗೆ ಅಧಿಕಾರ ಅನುಭವಿಸಿ, ರಾಜ್ಯಕ್ಕೆ ಚೂರುಪಾರು ಯೋಜನೆ ನೀಡಿ ಕೈತೊಳೆದುಕೊಳ್ಳುವ ಪರಿಪಾಠ ರೂಢಿಸಿಕೊಂಡು ನಮ್ಮನ್ನು ನೀವು ಅದಕ್ಕೆ ಯೋಗ್ಯರು ಎಂಬಂತೆ ಬಿಂಬಿಸಿವೆ. ಈ ಮನಸ್ಥಿತಿ ತಮ್ಮ ಸಂಸದರಿಗೂ ಬಂದಿದೆ. ತಮಗೆ ಅಧಿಕಾರ ಸಿಕ್ಕರೆ ಸಾಕು ರಾಜ್ಯಕ್ಕೆ ಯೋಜನೆ ಕೊಡದಿದ್ದರೂ ಪರಿವಾಗಿಲ್ಲ ಎನ್ನುವಂತೆ ವರ್ತಿಸುತ್ತಾರೆ. ಇದು ರಾಷ್ಟ್ರೀಯ ಪಕ್ಷಗಳಿಂದ ರಾಜ್ಯಕ್ಕೆ ಆಗುತ್ತಿರುವ ಬಹುದೊಡ್ಡ ಅನ್ಯಾಯ.
ರಾಜ್ಯದಲ್ಲಿ ಘರ್ಜಿಸುವ ಕೇಂದ್ರದ ಎದುರು ಬೆಕ್ಕುಗಳಾಗುವ ರಾಷ್ಟ್ರೀಯ ಪಕ್ಷಗಳ ಬದಲು ಪ್ರಾದೇಶಿಕತೆಗೆ ಒತ್ತು ನೀಡುವ ನೆರೆಯ ರಾಜ್ಯದ ಮಾದರಿಯನ್ನು ಆಲೋಚಿಸಿ ಪ್ರಾದೇಶಿಕ ಪಕ್ಷದ ಬಲ ವರ್ಧನೆಗೆ ಸಾರ್ವಜನಿಕರೂ ಕಾರ್ಯ ಪ್ರವೃತ್ತರಾಗುವ ಮೂಲಕ. ಜೆಡಿಎಸ್ ಬೆಂಬಲಿಸಬೇಕು ಎಂದು ಮನವಿ ಮಾಡುತ್ತೇನೆ. ಇನ್ನಾದರೂ ರಾಷ್ಟ್ರೀಯ ಪಕ್ಷಗಳು ಮೇಕೆದಾಟು ಯೋಜನೆಗೆ ಲಾಬಿ ಮಾಡಿ ಜನರ ಋಣ ತೀರಿಸಿ ಎಂದು ಕೆವಿ ಮಲ್ಲೇಶ್ ಹೇಳಿದ್ದಾರೆ.