ಕ್ವಾರಿಯಲ್ಲಿ ಗುಡ್ಡ ಕುಸಿತ’ ಓರ್ವನ ಶವ ಪತ್ತೆ!
ಕ್ವಾರಿಯಲ್ಲಿ ಗುಡ್ಡ ಕುಸಿತ’ ಓರ್ವನ ಶವ ಪತ್ತೆ!
ಓರ್ವನ ಶವ ಹೊರತೆಗೆದ SDRF, NDRF ತಂಡ!
ಮುಂದುವರೆದ ಶೋಧ ಕಾರ್ಯ.

ಚಾಮರಾಜನಗರ: ಗುಂಡ್ಲುಪೇಟೆ ತಾಲೂಕಿನ ಮಡಹಳ್ಳಿ ಗ್ರಾಮದಲ್ಲಿ ನಡೆಯುತ್ತಿದ್ದ ಬಿಳಿಕಲ್ಲಿನ ಗಣಿಗಾರಿಕೆಯ ಗುಡ್ಡ ಕುಸಿತದ ಪರಿಣಾಮ ಕಾರ್ಮಿಕರು ಸಿಲುಕಿರಬಹುದಾದ ಹಿನ್ನೆಲೆಯಲ್ಲಿ ಎಸ್.ಡಿ.ಆರ್.ಎಪ್ ಹಾಗೂ ಎನ್.ಡಿ.ಆರ್.ಎಪ್, ಅಗ್ನಿಶಾಮಕ ದಳ ಸಿಬ್ಬಂದಿಗಳು ಹಗಲು ರಾತ್ರಿ ಎನ್ನದೆ ಕಾರ್ಯಚರಣೆ ಮುಂದುವರೆಸಿದ್ದಾರೆ. ಗುಂಡ್ಲುಪೇಟೆ ಮಡಹಳ್ಳಿ ಸರ್ವೆ ನಂ 192ರಲ್ಲಿ ಬಿಳಿಕಲ್ಲು ಗುಡ್ಡ ನಿನ್ನೆ 11ಗಂಟೆಯ ಸಮಯದಲ್ಲಿ ಕುಸಿದಿತ್ತು ಎನ್ನಲಾಗಿದೆ. ಇದರಲ್ಲಿ ಹಲವಾರು ಕಾರ್ಮಿಕರು ಸಿಲುಕಿರಬಹುದಾದ ಶಂಕೆ ಹಿನ್ನಲೆಯಲ್ಲಿ ಜಿಲ್ಲಾಡಳಿತ ಕಾರ್ಯ ಚುರುಕುಗೊಳಿಸಲು ಸೂಚಿಸಿತ್ತು. ಈಗಾಗಲೇ ಚಾಮರಾಜನಗರ, ನಂಜನಗೂಡು, ಮೈಸೂರು, ಬೆಂಗಳೂರಿನ NDRF ತಂಡಗಳು ಕಾರ್ಮಿಕರ ಶೋದ ಕಾರ್ಯ ಮುಂದುವರೆಸಿದ್ದಾರೆ. ಈಗಾಗಲೆ ಒಂದು ಶವವನ್ನು ಹೊರತೆಗೆಯಲಾಗಿದೆ ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ.