ರಥೋತ್ಸವದ ವೇಳೆ ವ್ಯಕ್ತಿಯೋರ್ವನಿಗೆ ಕಾಲು ಮುರಿತ!
ನಂಜನಗೂಡು : ರಥೋತ್ಸವದ ವೇಳೆ ವ್ಯಕ್ತಿಯೋರ್ವನಿಗೆ ಕಾಲು ಮುರಿತ:-
ನಂಜನಗೂಡು, ದಕ್ಷಿಣ ಕಾಶಿ ನಂಜನಗೂಡಿನಲ್ಲಿ ನಡೆದ ಗೌತಮ ಪಂಚ ಮಹಾರಥೋತ್ಸವ ದೊಡ್ಡ ಜಾತ್ರೆಯಲ್ಲಿ ನೂಕುನುಗ್ಗಲಿಗೆ ಸಿಲುಕಿ ಭಕ್ತನೋರ್ವ ಕಾಲು ಮುರಿದುಕೊಂಡಿರುವ ಘಟನೆ ಜರುಗಿದೆ. ಪಟ್ಟಣದ ಚಾಮಲಾಪುರ ಹುಂಡಿ ನಿವಾಸಿ 45 ವರ್ಷದ ಯೋಗೇಶ್ ಎಂಬುವರೇ ಮೂಳೆ ಮುರಿತಕ್ಕೊಳಗಾಗಿ ಆಸ್ಪತ್ರೆ ಸೇರಿರುವ ದುರ್ದೈವಿ ಅಪಾರ ಜನಸ್ತೋಮದ ನಡುವೆ ರಥೋತ್ಸವ ನಡೆಯುತ್ತಿದ್ದ ವೇಳೆ ಜನರ ನೂಕುನುಗ್ಗಲಿನಿಂದಾಗಿ ಬಿದ್ದು ಮೂಳೆ ಮುರಿದು ಕೊಂಡಿದ್ದಾನೆ. ಇನ್ನೇನು ಶ್ರೀಕಂಠೇಶ್ವರ ಸ್ವಾಮಿಯವರ ದೊಡ್ಡ ರಥ ಸ್ವಸ್ಥಾನ ಸೇರುವ ಸಂದರ್ಭದಲ್ಲಿ ಈ ಅವಗಢ ಸಂಭವಿಸಿದೆ.

ಕಾಲು ಮುರಿದುಕೊಂಡು ನರಳಾಡುತ್ತಿದ್ದ ವ್ಯಕ್ತಿಯನ್ನು ಸಾರ್ವಜನಿಕರು ಹಾಗೂ ದೇವಾಲಯದ ಸಿಬ್ಬಂದಿ ನಂಜನಗೂಡಿನ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ