ಅಪರಿಚಿತ ವಾಹನ ಡಿಕ್ಕಿ’ ಚಿರತೆ ಸ್ಥಳದಲ್ಲೇ ಸಾವು
ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದ ಪರಿಣಮ ಚಿರತೆಯೊಂದು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಡೆದಿದೆ. ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕಿನ ಪಿರಿಯಪಟ್ಟಣ ರಸ್ತೆಯ ನಾಗಮಂಗಲ ಗ್ರಾಮದ ಬಳಿ ಘಟನೆ ನಡೆದಿದೆ. ಇಲ್ಲಿನ ನಾಗಮಂಗಲ ಸಾಮಾಜಿಕ ಅರಣ್ಯ ಪ್ರದೇಶ ಬಳಿ ಮೃತ ಚಿರತೆ ಬಳಿ ಸಾಕಷ್ಟು ಜನರು ಜಮಾಯಿಸಿದ್ದರು. ಮೃತ ಚಿರತೆ ಪೋಟೋ ತೆಗೆಯಲು ಜನರು ಪೈಪೋಟಿ ಬಿದ್ದಿದ್ದು, ಚಿರತೆ ಉಗುರು ತೆಗೆದುಕೊಳ್ಳಲು ಜನರು ಮುಂದಾಗಿದ್ದರು. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ.