ಮೈಸೂರಿನಲ್ಲಿ ಮಹಿಷಾ ದಸರಾ ಆಚರಣೆಗೆ ಸಿದ್ದತೆ!
ಮೈಸೂರು – ಅಶೋಕಪುರಂ : ಮೈಸೂರಿನಲ್ಲಿ ಮಹಿಷಾ ದಸರಾ ಆಚರಣೆಗೆ ಸಿದ್ದತೆ. ಮಹಿಷ ದಸರಾ ಆಚರಣಾ ಸಮಿತಿಯಿಂದ ಆಚರಣೆ. ಮೈಸೂರಿನ ಬಲ್ಲಾಳ್ ವೃತ್ತದ ಬುದ್ಧ ವಿಹಾರದಿಂದ ರ್ಯಾಲಿ. ಮೈಸೂರಿನ ಅಶೋಕಪುರಂನ ಅಂಬೇಡ್ಕರ್ ಪಾರ್ಕ್‌ವರೆಗೆ ಮೆರವಣಿಗೆ.

ಬುದ್ಧ ವಿಹಾರದ ಬಳಿ ಮೆರವಣಿಗೆಗೆ ಸಿದ್ದತೆ. ಚಾಮುಂಡಿ ಬೆಟ್ಟದಲ್ಲಿ ಮಹಿಷಾ ದಸರಾ ಆರಣೆಗೆ ಅನುಮತಿ ಕೇಳಿದ್ದ ಸಮಿತಿ. ಆದರೆ ಮಹಿಷಾ ದಸರಾಗೆ ಅನುಮತಿ ನಿರಾಕರಣೆ ಹಿನ್ನೆಲೆ. ಮೈಸೂರಿನ ಅಶೋಕಪುರಂನಲ್ಲೇ ಮಹಿಷಾ ದಸರಾ ಆಚರಣೆಗೆ ಸಿದ್ಧತೆ. ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್.