ಮೇಕೆದಾಟು ಡ್ಯಾಂ ಎಷ್ಟು ಅನುಕೂಲ- ವಿಚಾರದ ಬಗ್ಗೆ ಇಂಜಿನಿಯರ್‌ಗಳ ಸಭೆ
ಮೇಕೆದಾಟು ಜಲಾಶಯ ನಿರ್ಮಾಣ, ಮೈಸೂರು ಭಾಗಕ್ಕೆ ಎಷ್ಟು ಅನುಕೂಲಕರ ಎಂಬ ವಿಚಾರದ ಕುರಿತು ಮೈಸೂರಿನಲ್ಲಿ ಇಂಜಿನಿಯರ್ ಗಳು ಹಾಗೂ ರೈತ ಮುಖಂಡರ ನೇತೃತ್ವದಲ್ಲಿ ಸಭೆ. ಮೈಸೂರು ನಗರದ ರೋಟರಿ ಸಭಾಂಗಣದಲ್ಲಿ ಸಭೆ ನಡೆಯುತ್ತಿದ್ದು, ದಿ ಇನ್ಸ್ಟಿಟ್ಯೂಟ್ ಆಫ್ ಇಂಜಿಯರ್ ಇಂಡಿಯಾದ ಅಧ್ಯಕ್ಷ ಲಕ್ಷ್ಮಣ್ ನೇತೃತ್ವದಲ್ಲಿ ಚರ್ಚೆ ಆರಂಭವಾಗಿದೆ. ಯೋಜನೆ ಅನುಕೂಲತರ ಕುರಿತು ಲಕ್ಷ್ಮಣ್ ರಿಂದ ಮಾಹಿತಿ ನೀಡುತ್ತಿದ್ದು ಜಲಾಶದ ಸಂಪೂರ್ಣ ವಿವರವನ್ನ ಲಕ್ಷ್ಮಣ್ ಮಂಡಿಸಿದ್ರು.
ಈ ಯೋಜನೆ ವಾಸ್ತವತೆಯನ್ನು ಜನಸಾಮಾನ್ಯರಿಗೆ ತಿಳಿಸುವ ಒಂದು ಪ್ರಯತ್ನ ಇದಾಗಿದ್ದು, ಇದರಲ್ಲಿ ಯಾವುದೇ ರಾಜಕೀಯ ಇಲ್ಲ. ಈ ಯೋಜನೆಯಿಂದ ಎಂಟರಿಂದ ಹತ್ತು ಜಿಲ್ಲೆಗಳಿಗೆ ಅನುಕೂಲ ಆಗಲಿದೆ. 1924 ರಲ್ಲಿ ಅಂದಿನ ಮದ್ರಾಸ್ ಪ್ರಾಂತ್ಯದ ಸರ್ಕಾರ ತೀರ್ಮಾನ ಮಾಡಿತ್ತು. 2013 ರಲ್ಲಿ ಮತ್ತೆ ಈ ಯೋಜನೆಗೆ ಡಿಪಿಆರ್ ತಯಾರು ಮಾಡಲಾಗಿತ್ತು. ಈಗ ಮತ್ತೆ ಈ ಜಲಾಶ ನಿರ್ಮಾಣ ಮಾಡಬೇಕಿದೆ. ಮೇಕೆದಾಟೆಂಬ ಯೋಜನೆಯಿಂದ ನಮ್ಮನೀರನ್ನು ಶೇಖರಣೆ ಮಾಡುಲು ನಿರ್ಮಾಣ ಮಾಡಲಾಗುತ್ತೆ. ಡಿಪಿಆರ್ ಪ್ರಕಾರ ಬೆಂಗಳೂರಿಗೆ ಕುಡಿಯುವ ನೀರಿಗೆ ಬಳಕೆ ಮಾಡಲಾಗುತ್ತದೆ. 4.75 ಟಿಎಂಸಿ ನೀರನ್ನು ಬೆಂಗಳೂರಿಗರ ಕುಡಿಯಲು ಬಳಕೆ ಮಾಡಬಹುದಾಗಿದೆ. ಉಳಿದದ್ದನ್ನು ವಿದ್ಯುಚ್ಛಕ್ತಿ ಉತ್ಪಾದನೆಗೆ ಬಳಕೆ ಮಾಡಲಾಗುತ್ತದೆ. ಇದನ್ನ ವ್ಯವಸಾಯಕ್ಕೆ ಬಳಕೆ ಮಾಡಲು ಸಾಧ್ಯವಿಲ್ಲ ಎಂದು ಮಾಹಿತಿ ನೀಡಿದ ಲಕ್ಷ್ಮಣ್.