ಮೇಲುಕೋಟೆ ಚೆಲುವನಾರಾಯಣನಿಗೆ ದೀವಟಿಗೆ ಸಲಾಂ ವಿವಾದ: ದೇವಾಲಯದ ಆಡಳಿತ ಮಂಡಳಿ ವರದಿ ಕೇಳಿದ ಜಿಲ್ಲಾಡಳಿತ
ಮಂಡ್ಯ: ಮೇಲುಕೋಟೆ ಚೆಲುವನಾರಾಯಣನಿಗೆ ದೀವಟಿಗೆ ಸಲಾಂ ವಿವಾದ ವಿಚಾರ. ದೇವಾಲಯದ ಆಡಳಿತ ಮಂಡಳಿ ವರದಿ ಕೇಳಿದ ಜಿಲ್ಲಾಡಳಿತ. ದೇವಾಲಯದ ಇಓ ಹಾಗೂ ಪಾಂಡವಪುರ ಉಪವಿಭಾಗಾಧಿಕಾರಿಗಳಿಗೆ ವರದಿ ಕೇಳಿದ ಡಿಸಿ.
ಮಂಡ್ಯ ಡಿಸಿ ಅಶ್ವಥಿಯವರಿಂದ ವರದಿ ಸಲ್ಲಿಸುವಂತೆ ಸೂಚನೆ. ದೀವಟಿಗೆ ಸಲಾಂ ಎಂಬ ಹೆಸರಿನಲ್ಲಿ ದೇಗುಲದಲ್ಲಿ ನಡೆಯುತ್ತಿದ್ದ ಆರತಿ. ಸಲಾಂ ಎಂಬ ಹೆಸರನ್ನ ಬದಲಾಯಿಸುವಂತೆ ಮನವಿ ಸಲ್ಲಿಸಿದ್ದ ಜಿಲ್ಲಾ ಧಾರ್ಮಿಕ ಪರಿಷತ್. ಆ ಮನವಿಯನ್ನ ಪರಿಶೀಲಿಸಿ ಸ್ಪಷ್ಟವಾದ ಅಭಿಪ್ರಾಯ ತಿಳಿಸುವಂತೆ ಸೂಚನೆ. ಅದರಂತೆ ಒಕ್ಕೊರಲಾಗಿ ಸಂಜೆ ವೇಳೆ ನಡೆಯುತ್ತಿದ್ದ ದೀವಟಿಗೆ ಸಲಾಂ ಕೈ ಬಿಡುವಂತೆ ಅಭಿಪ್ರಾಯ ತಿಳಿಸಿರುವ ದೇಗುಲದ ಸ್ಥಾನಿಕರು.

ಮುಸ್ಲಿಂ ದಾಳಿ ಕೋರರಿಂದ ಸಂಧ್ಯಾರತಿ ಬದಲಿಗೆ ದೀವಟಿಗೆ ಸಲಾಂ ಎಂಬ ಪದ ಬಂದಿದೆ. ಸಲಾಂ ಪದ ತೆಗೆದು ಸಂಧ್ಯಾರತಿ ಎಂದು ಹೆಸರಿಡುವಂತೆ ಸ್ಥಾನಿಕರ ಅಭಿಪ್ರಾಯ. ಈಗಾಗಲೇ ಇಓ ಹಾಗು ಎಸಿಯವರಿಗೆ ಲಿಖಿತ ರೂಪದಲ್ಲಿ ಅಭಿಪ್ರಾಯ ತಿಳಿಸಿರುವ ಅರ್ಚಕರು. ಸಲಾಂ ಪದ ತೆಗೆದು ಹಾಕುವ ವಿಶ್ವಾಸ ವ್ಯಕ್ತಪಡಿಸಿದ ದೇಗುಲದ ಸ್ಥಾನಿಕ ಶ್ರೀನಿವಾಸನ್.