ಮೈಸೂರಲ್ಲಿ ಮೋದಿ 2.0 ದೇಹದಾರ್ಢ್ಯ ಸ್ಪರ್ಧೆ!
ಮೋದಿ ಹೆಸರಲ್ಲಿ ದೇಹದಾರ್ಢ್ಯ ಸ್ಪರ್ಧೆ!
ಮೈಸೂರು ಯುವ ಮೋರ್ಚಾ ಘಟಕದ ವತಿಯಿಂದ ದಿನಾಂಕ : 02.07.2022 ರ ಶನಿವಾರದಂದು ಹೆಬ್ಬಾಳ್‌ನಲ್ಲಿ ಮೋದಿ ಕಪ್ 2.0 ಜಿಲ್ಲಾ ಮಟ್ಟದ ದೇಹದಾರ್ಡ್ಯ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಕಲ್ಪನೆಯಂತೆ ಸದೃಢ ಭಾರತ ಜೊತೆಗೆ ಸದೃಢ ವ್ಯಕ್ತಿ ನಿರ್ಮಾಣದ ದೃಷ್ಟಿಯಿಂದ ನಗರ ಯುವ ಮೋರ್ಚಾ ಹಲವು ರೀತಿಯ ಯುವಕರಿಗೆ ಆಸಕ್ತಿಯನ್ನು ಬೆಳೆಸುವ ದೃಷ್ಟಿಯಿಂದ ಕ್ರೀಡೆಗಳನ್ನು ಆಯೋಜಿಸುತ್ತಾ ಬರುತ್ತಿದೆ . ಅದರಂತೆ ದಿನಾಂಕ : 02.07.2002 ರಂದ ಹೆಬ್ಬಾಳನಲ್ಲಿ ಮೋದಿ ಕಪ್ – 2.0 ಜಿಲ್ಲಾ ಮಟ್ಟದ ದೇಹದಾರ್ಡ್ಯ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ . ಈ ಸ್ಪರ್ಧೆಗೆ ಆಸಕ್ತಿಯುಳ್ಳ ಸ್ಪರ್ಧಾಳುಗಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ತಮ್ಮಲ್ಲಿ ಕೋರುತ್ತೇನೆಂದು ಮೈಸೂರಿನ ಸುದ್ದಿಗೋಷ್ಠಿಯಲ್ಲಿ ಮೈಸೂರಿನ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಭರತ್ ತಿಳಿಸಿದರು. ಅಲ್ಲದೆ ಕಾರ್ಯಕ್ರಮದಲ್ಲಿ ಸಂಸದರು, ಶಾಸಕರು ಸೇರಿ ಮುಖಂಡರು ಭಾಗಿಯಾಗಲಿದ್ದಾರೆ ಎಂದರು. ಇದೇವೇಳೆ ಸಂತೋಷ್, ಬಾಡಿ ಬಿಲ್ಡರ್ಸ್ ಅಸೋಸಿಯೇಷನ್ ಕಾರ್ಯದರ್ಶಿ ನವೀನ್ ಚಂದ್ರ ಸೇರಿ ಹಲವರು ಉಪಸ್ಥಿತರಿದ್ದರು. ಇನ್ನು ಇದರ ಸ್ಪಾನ್ಸರ್ ಆಗಿ ಬಿಜೆಪಿ ನಗರ ಯುವ ಮೋರ್ಚಾ ಅಧ್ಯಕ್ಷ ಎಂಜೆ ಕಿರಣ್‌ಗೌಡ್, ಬಾಬು, ಶ್ರೀಧರ್ ಆಗಿದ್ದಾರೆ. ಅಲ್ಲದೇ ಹಳೆ ಮೈಸೂರು ಭಾಗದ ಎಲ್ಲಾ ಜಿಲ್ಲೆಗಳ ಸ್ಪರ್ಧಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದ್ದು, ಕ್ಯಾಷ್ ಪ್ರೈಜ್ ಜೊತೆಗೆ ಭಾಗಿಯಾದ ಸ್ಪರ್ಧಿಗಳಿಗೆ ಸರ್ಟಿಫಿಕೇಟ್ ನೀಡಲಾಗುವುದು ಎಂದರು.