ನೆಲಮಂಗಲದ ಕುಟುಂಬದ ಮೂವರ ಆತ್ಮಹತ್ಯೆ ಪ್ರಕರಣ: ಕುಟುಂಬಕ್ಕೆ ಬಾಕಿಯಿರುವ ಪರಿಹಾರ ನೀಡಿ ಶಾಸಕ ಸಾ.ರಾ.ಮಹೇಶ್
ಮೈಸೂರು/ಬೆಂಗಳೂರು, ಅ.3-ನೆಲಮಂಗಲದ ಒಂದೇ ಕುಟುಂಬದ ಮೂವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಸಾ ರಾ ಮಹೇಶ್ ಅವರು ಸಿಎಂ ಬೊಮ್ಮಾಯಿ ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ.

ಪತ್ರ ಬರೆದು ಮೃತರ ಕುಟುಂಬಕ್ಕೆ ಬಾಕಿಯಿರುವ ಪರಿಹಾರ ಶೀಘ್ರ ನೀಡುವಂತೆ ಮನವಿ ಮಾಡಿದ್ದಾರೆ.
ಪತ್ರದಲ್ಲಿ ಪ್ರಕರಣದ ಸಂಪೂರ್ಣ ವಿವರ ನೀಡಿರುವ ಸಾ.ರಾ.ಮಹೇಶ್, ಕೋವಿಡ್‌ನಿಂದ ಮೃತಪಟ್ಟಿದ್ದ ಪ್ರಸನ್ನ ಕುಮಾರ್ ಅವರ ಕುಟುಂಬಕ್ಕೆ ಪರಿಹಾರ ಸಕಾಲದಲ್ಲಿ ಸಿಕ್ಕಿಲ್ಲ. ಒಂದು ವೇಳೆ ಸಿಕ್ಕಿದ್ದರೆ ಅಮಾಯಕ ಜೀವಗಳು ಉಳಿಯುತ್ತಿದ್ದವು. ಈ ಕೂಡಲೇ ಬಾಕಿಯಿರುವ ಹಣ ಕೊಡಿಸಿ. ಜೊತೆಗೆ ಬಿಪಿಎಲ್ ಕುಟುಂಬದವರಿಗೆ ನೀಡುವ 1 ಲಕ್ಷ ರೂ. ಪರಿಹಾರವನ್ನು ನೀಡಿ ಎಂದಿದ್ದಾರೆ.

ಒಂದು ಕಡೆ ಪ್ರಾಮಾಣಿಕ ನೌಕರರು ಈ ರೀತಿ ಬಲಿಯಾಗುತ್ತಿದ್ದಾರೆ.
ಮತ್ತೊಂದು ಕಡೆ ಕೆಲವು ಭ್ರಷ್ಟ ನೌಕರರು ಪ್ರತಿನಿತ್ಯ ಹಣ ಲೂಟಿ ಮಾಡುತ್ತಿದ್ದಾರೆ. ಪ್ರಾಮಾಣಿಕ ನೌಕರರ ಹಿತ ಕಾಯುತ್ತಿಲ್ಲ ಎಂದು
ಪತ್ರದ ಮೂಲಕ ಅಸಮಾಧಾನ ವ್ಯಕ್ತಪಡಿಸಿದ್ದಾರೆ.