ದಸರಾ ಮಹೋತ್ಸವಕ್ಕೆ ಸಿದ್ಧತೆ: ಇಂದು 3ನೇ ಹಂತದ ಕುಶಾಲತೋಪು ತಾಲೀಮು
ಮೈಸೂರು,ಅ.8-ವಿಶ್ವವಿಖ್ಯಾತ ದಸರಾ ಮಹೋತ್ಸವಕ್ಕೆ ನಿನ್ನೆ ಚಾಲನೆ ಸಿಕ್ಕಿದ್ದು, ಮೈಸೂರಿನಲ್ಲಿ ನವರಾತ್ರಿ ಸಂಭ್ರಮ ಕಳೆಗಟ್ಟಿದೆ. ಅದರಂತೆ ಜಂಬೂಸವಾರಿಗೆ ಸಕಲ ತಾಲೀಮು ಮಾಡಿಕೊಳ್ಳಲಾಗುತ್ತಿದೆ.
ಇಂದು ಅರಮನೆ ಆವರಣದಲ್ಲಿರುವ ಕೋಟೆ ಮಾರಮ್ಮನವರ ದೇಗುಲದ ಬಳಿ ಕುಶಾಲತೋಪುಗಳನ್ನು ಸಿಡಿಸುವ ಮೂರನೇ ಹಂತದ ತಾಲೀಮು ನಡೆಸಲಾಯಿತು.

ಇಂದಿನ ಕುಶಾಲತೋಪು ತಾಲೀಮಿನ ವೇಳೆ ಮೂರು ಆನೆಗಳು ಬೆದರಿವೆ. 7 ಫಿರಂಗಿ ಗಾಡಿಗಳಿಂದ 21 ಬಾರಿಕುಶಾಲತೋಪುಗಳನ್ನು ಸಿಎಆರ್ ಸಿಬ್ಬಂದಿಗಳು ಸಿಡಿಸಿದರು.
ವಿಜಯದಶಮಿ ಜಂಬೂಸವಾರಿ ಮೆರವಣಿಗೆಯ ದಿನ ರಾಷ್ಟ್ರಗೀತೆ ನುಡಿಸುವ ವೇಳೆ 21 ಬಾರಿ ಕುಶಾಲತೋಪುಗಳನ್ನು ಸಿಡಿಸಿ ಗೌರವ ಸಲ್ಲಿಸಲು ಪೂರ್ವ ಸಿದ್ಧತೆ ಮಾಡಿಕೊಳ್ಳಲಾಗಿದೆ.