ಬೇಡವೆಂದು’ ಮನಸ್ಸು ಒಪ್ಪದೆ’ ನೋವಿನಿಂದಲೇ ಪುನೀತ್ ಸಮಾಧಿಗೆ ಕೈ ಮುಗಿದು ಬಂದ ಪ್ರತಾಪ್ ಸಿಂಹ!
ಅಪ್ಪು ನೋಡಲು ಲಕ್ಷ ಲಕ್ಷ ಅಭಿಮಾನಿಗಳು ಬಂದಿದ್ರು. ಮತ್ತೇ ಕೆಲವರು ಅಪ್ಪವನ್ನ ಮೃತಪಟ್ಟ ಸ್ಥಿತಿಯಲ್ಲಿ ನೋಡೋಕೆ ಮಾತ್ರ ಅದೆಷ್ಟೋ ಲಕ್ಷ ಮಂದಿಗೆ ಹಾಗೆ ಇಲ್ಲ. ಮತ್ತೇ ಕೆಲವರು ಮನಸ್ಸು ತಡೆಯಲಾರದೆ ಕೊನೆ ಕ್ಷಣದಲ್ಲಿ ಬಂದು ಸಮಾಧಿ ಬಳಿ ಪುನೀತ್ ಕೈ ಮುಗಿದು ಹೋಗಿದ್ರು.

ಈ ಸಾಲಿಗೆ ಗಣ್ಯರು ಕೂಡ ಸೇರಿದ್ದಾರೆ. ಅದರಲ್ಲು ಮೈಸೂರು ಕೊಡಗು ಸಂಸದ ಪ್ರತಾಪ್ ಸಿಂಹ ಕೂಡ ಒಬ್ಬರು. ಹೌದು ಅಪ್ಪು ಅವರನ್ನ ಬಹಳ ಹತ್ತಿರದಿಂದ ಜೊತೆಗೆ ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಪ್ರತಾಪ್ ಸಿಂಹ ಪುನೀತ್‌ರನ್ನ ಮಲಗಿರುವ ಆ ಸ್ಥಿತಿಯಲ್ಲಿ ನೋಡಲಾಗದೆ ಅಂತ್ಯ ಸಂಸ್ಕಾರದ ವಿಧಿವಿಧಾನಗಳಲ್ಲಿ ಭಾಗಿಯಾಗಲಿಲ್ಲ.

ಆದರೆ ಅದ್ಯಾಕೋ ಕೊನೆ ಕ್ಷಣದಲ್ಲಿ ಎಂಬಂತೆ ಮನಸ್ಸು ತಡೆಯಲಾರದೆ ಭಾರವಾದ ಮನಸ್ಸಿನಿಂದಲೇ ಪುನೀತ್‌ರ ಸಮಾಧಿಗೆ ಕೈಮುಗಿದು ಬಂದಿದ್ದಾರೆ. ಮಾತ್ರವಲ್ಲ ಇದೇವೇಳೆ ಎದುರಿಗೆ ಸಿಕ್ಕ ರಾಘವೇಂದ್ರ ರಾಜಕುಮಾರ ಅವರನ್ನು ಸಹ ಭೇಟಿಯಾಗಿ ಮಾತುಕತೆ ಆಡಿ ಬಂದಿದ್ದಾರೆ. ಆದರೆ ಪ್ರತಾಪ್ ಸಿಂಹರಿಗೆ ಆ ದುಖ, ನೋವು, ಬೇಸರ ಉಮ್ಮಳಿಸಿ ಬಂದಿದ್ದು ಅದನ್ನೆಲ್ಲ ತಡೆದುಕೊಂಡು ವಾಪಾಸ್ ಆಗಿದ್ದಾರೆ.

ಪ್ರತಾಪ್ ಸಿಂಹ ಹೇಳಿಕೆ
ಪುನೀತ್ ಅವರನ್ನು ಶವವಾಗಿ ನೋಡಲು ಇಷ್ಟವಿರಲಿಲ್ಲ, ಹಾಗಾಗಿ ಹೋಗಿರಲಿಲ್ಲ. ಮತ್ತೆ ಮನಸ್ಸು ತಡೆಯಲಿಲ್ಲ, ಸಮಾಧಿಯ ಬಳಿ ಹೋದೆ. ಎದುರಿಗೆ ಸಿಕ್ಕಿದ ರಾಘಣ್ಣ, ನಾವು ಎಲ್ಲಿ ಸಿಕ್ಕಿದ್ದೆವು ಹೇಳಿ, ಕೋಟ್ಯಧಿಪತಿ ರೆಕಾರ್ಡಿಂಗ್ ವೇಳೆ ಅಲ್ವಾ ಎಂದರು.

ಹೌದೆಂದೇ. ನೋಡಿ ಅವನೇ ನಮ್ಮನ್ನು ಮತ್ತೆ ಒಂದು ಮಾಡಿದ್ದಾನೆ ಎಂದರು. ಆದರೆ ಕಣ್ಣಲ್ಲಿ ನೀರು, ಎದೆಯಲ್ಲಿ ಸಂಕಟ ಮಾತ್ರ ಉಳಿದಿದೆ, ಪುನೀತ್ ಸರ್ ಇಲ್ಲ.