ಹಿಜಾಬ್ v/s ಕೇಸರಿ ವಿವಾದದ ನಡುವೆ ವಿಜಯನಗರ ಜಾತ್ರೆಯಲ್ಲಿ ಸಾಮರಸ್ಯದ ಭಾವ
ವಿಜಯನಗರ,ಫೆ.10- ಎಲ್ಲೆಡೆ ಹಿಜಾಬ್ ಹಾಗೂ ಕೇಸರಿ ಶಾಲು ವಿವಾದ ಬುಗಿಲೆದ್ದಿದೆ. ಪರ-ವಿರೋಧದ ಪ್ರತಿಭಟನೆಗಳು ನಡೆಯುತ್ತಿದೆ. ರಾಜಕೀಯ ಪಕ್ಷಗಳ ನಡುವೆ ವಾಕ್ಸಮರ ನಡೆಯುತ್ತಿದೆ.
ವಿವಾದಿಂದಾಗಿ ಕೆಲವೆಡೆ ಪರಿಸ್ಥಿತಿ ಉದ್ಘಿಗ್ನ ನಿರ್ಮಾಣಗೊಂಡಿದೆ. ವಿವಾದದ ಕುರಿತ ವಿಚಾರಣೆಯನ್ನು ಹೈಕೋರ್ಟ್ ವಿಸ್ತ್ರತ ಪೀಠಕ್ಕೆ ವರ್ಗಾಯಿಸಿದೆ. ಇವೆಲ್ಲದರ ನಡುವೆ ಸಾಮರಸ್ಯದ ಭಾವ ವಿಜಯನಗರದಲ್ಲಿ ಮೂಡಿದೆ.

ವಿಜಯನಗರದ ಜಾತ್ರೆಯೊಂದರಲ್ಲಿ ಯುವಕರು ಸಾಮರಸ್ಯ ಸಾರುವ ಸಂದೇಶ ಬರೆದಿರೋ ಬಾಳೆಹಣ್ಣು ಗಳನ್ನು ರಥಕ್ಕೆ ಎಸೆದಿರುವ ಘಟನೆ ನಡೆದಿದೆ.
ವಿಜಯನಗರದ ಹಗರಿಬೊಮ್ಮನ ಹಳ್ಳಿ ತಾಲೂಕಿನ ಚಿಮ್ಮನಹಳ್ಳಿ ದುರ್ಗಾಂಬಿಕೆಯ ರಥೋತ್ಸವದಲ್ಲಿ “ಜಾತಿಯತೆ ಅಳಿಯಲಿ, ಸಮಾನತೆ ಬೆಳಗಲಿ ” ಅಂತ ಬಾಳೆ ಹಣ್ಣಿನ ಮೇಲೆ ಬರೆದು ರಥಕ್ಕೆ ಎಸೆದಿದ್ದಾರೆ. ಇದಕ್ಕೆ ಸಾಕಷ್ಟು ಮಂದಿಯಿಂದ ಮೆಚ್ಚುಗೆ ವ್ಯಕ್ತವಾಗಿದೆ.