ಅಪ್ಪು’ ಅಗಲಿಕೆಯ ನೋವಲ್ಲೇ ಕೆಲಸಕ್ಕೆ ಮರಳಿದ ಶಿವಣ್ಣ.
ಪವರ್ ಸ್ಟಾರ್ ಪುನೀತ್ ರಾಜಕುಮಾರ್ ನಿಧನದ ದುಃಖದ ನಡುವೆಯೂ ನಟ ಶಿವರಾಜಕುಮಾರ್ ಮತ್ತೇ ಕೆಲಸಕ್ಕೆ ಮರಳಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ಭಜರಂಗಿ-2 ಸಿನಿಮಾವನ್ನು ಶಿವರಾಜ್ ಕುಮಾರ್ ಭಾನುವಾರ ಅನುಪಮಾ ಚಿತ್ರಮಂದಿರಲ್ಲಿ ಅಭಿಮಾನಿಗಳ ಜೊತೆ ವೀಕ್ಷಿಸಿದರು.

ಹರ್ಷ ನಿರ್ದೇಶನದ ಸಿನಿಮಾವನ್ನು ಜಯಣ್ಣ ಫಿಲ್ಮ್ಸ್ ನಿರ್ಮಾಣ ಮಾಡಿತ್ತು. ಅಕ್ಟೋಬರ್ 29 ರಂದು ಸಿನಿಮಾ ರಿಲೀಸ್ ಆಗಿತ್ತು, ಆದರೆ ಅದೇ ದಿನ ಪುನೀತ್ ಅಕಾಲಿಕ ಮರಣಕ್ಕೆ ತುತ್ತಾದ ಹಿನ್ನೆಲೆಯಲ್ಲಿ ಪ್ರದರ್ಶನ ಸ್ಥಗಿತಗೊಳಿಸಲಾಗಿತ್ತು. ಇದೀಗ ಶಿವಣ್ಣ ತಮ್ಮ 125ನೇ ಸಿನಿಮಾವನ್ನು ನವೆಂಬರ್ 21 ರಂದು ಸರಳ ಮುಹೂರ್ತದೊಂದಿಗೆ ಪ್ರಾರಂಭಿಸಲಿದ್ದಾರೆ.