ಮೈಸೂರಿನಲ್ಲಿ ಶಕ್ತಿಧಾಮದ ಮಕ್ಕಳ ಜೊತೆ ಮಗುವಾದ ಶಿವಣ್ಣ!

ಪುನೀತ್ ರಾಜಕುಮಾರ್ ಅಗಲಿಕೆ ಇನ್ನು ಅಭಿಮಾನಿಗಳು ನಂಬದಂತಹ ಪರಿಸ್ಥಿತಿಗೆ ತಂದಿದ್ದು ಮೈಸೂರಿನ ಶಕ್ತಿಧಾಮದ ಮಕ್ಕಳು ಪುನೀತ್‌ರನ್ನ ಮರಿತಾರಾ? ಖಂಡಿತವಾಗಿಯೂ ಇಲ್ಲ. ಬಹಳ ನಾಜೂಕಿನ ಮನಸ್ಸಿನ ಮಕ್ಕಳಾದ ಇವರಿಗೆ ಪುನೀತ್ ಎಲ್ಲವು ಆಗಿದ್ದರು. ಆದರೆ ಈಗ ಆ ಸ್ಥಾನ ತುಂಬಲು ರಾಜವಂಶದ ರಾಜಕುಮಾರನೇ ಬಂದಿದ್ದಾನೆ. ಅವರೇ ಡಾ.ಶಿವರಾಜ್ ಕುಮಾರ್.

  • ಹೌದು, ಸರಳ ಸಜ್ಜನಿಕೆಯ ವ್ಯಕ್ತಿಯಾಗಿರುವ ಶಿವಣ್ಣ ಇದೀಗಾ ಮೈಸೂರಿನ ಶಕ್ತಿಧಾಮದ ಮಕ್ಕಳ ಪೋಷಕ, ಸ್ನೇಹಿತ, ಶಿಕ್ಷಕ. ಈ ಮಕ್ಕಳ ಜೊತೆ ಆಟವಾಡುತ್ತ ಮಕ್ಕಳ ಮನಸ್ಸಿನಲ್ಲಿ ಪ್ರೀತಿಯನ್ನ ಬಿತ್ತುತ್ತಿದ್ದಾರೆ. ಅಪ್ಪು ಅಗಲಿಕೆಯ ನೋವನ್ನ ದೂರ ಮಾಡಿ, ಮಕ್ಕಳ ಶೈಕ್ಷಣಿಕ ಕ್ರೀಡಾ ಚಟುವಟಿಕೆ ತುಂಬುತ್ತ, ಆ ಮಕ್ಕಳ ಪ್ರೀತಿಯಲ್ಲಿ ಅಪ್ಪುರನ್ನ ಕಾಣುತ್ತಿದ್ದಾರೆ. ಇತ್ತ ಶಕ್ತಿಧಾಮದ ಮಕ್ಕಳು ಶಿವಣ್ಣನಲ್ಲಿ ಅಪ್ಪುರನ್ನ ಕಾಣುತ್ತಿದ್ದಾರೆ. ಹಾಗಾಗಿಯೇ ಮೈಸೂರಿಗೆ ಸದ್ದಿಲ್ಲದೆ ಬಂದು ಹೋಗುತ್ತಿರುವ ಶಿವಣ್ಣ ಮಕ್ಕಳ ಜೊತೆ ಮಗುವಾಗಿ ಆಟವಾಡುತ್ತಿದ್ದಾರೆ.

ಇತ್ತಿಚ್ಚಿಗಷ್ಟೇ ಶಕ್ತಿಧಾಮದ ಮಕ್ಕಳ ಜೊತೆ ಶಿವಣ್ಣ ಮಗುವಾಗಿ ಖೋ ಖೋ ಆಟವಾಡಿ ಖುಷಿಪಟ್ಟಿದ್ದಾರೆ. ಈ ವೇಳೆ ಔಟ್ ಆಗುವ ಶಿವಣ್ಣ ಬಳಿಕ ತಾವು ಫೀಲ್ಡ್‌ಗೆ ಇಳಿದು ಮಕ್ಕಳ ಆಟ ಆಡಿದ್ದಾರೆ. ಈಗಾಗಲೇ ಅಪ್ಪು ಕಳೆದುಕೊಂಡ ದುಖದಲ್ಲಿ ಶಿವಣ್ಣ, ಮಕ್ಕಳು, ಅಭಿಮಾನಿಗಳು ಈ ಸಣ್ಣಪುಟ್ಟ ಆಟದ ನಡುವೆಯು ಅಪ್ಪುರನ್ನ ನಿತ್ಯ ನೆನಪು ಮಾಡಿಕೊಳ್ತಿರೋದು ಸಂತಸವೇ ಸರಿ

About Author

Leave a Reply

Your email address will not be published. Required fields are marked *