ಮೈಸೂರಿಗೆ ಆಗಮಿಸಿದ ದಸರಾ ಉದ್ಘಾಟಕ SM ಕೃಷ್ಣ!
ಮೈಸೂರು : ದಸರಾ ಉದ್ಘಾಟನೆಗೆ ಮೈಸೂರಿಗೆ ಆಗಮಿಸಿದ ಎಸ್.ಎಂ. ಕೃಷ್ಣ ಅವರಿಗೆ ಮೈಸೂರಿನ ಕೊಲಂಬಿಯಾ ಏಷಿಯಾ ಆಸ್ಪತ್ರೆ ಬಳಿ ಸಂಭ್ರಮದಿಂದ ಸ್ವಾಗತ ಕೋರಲಾಯಿತು.

ಡೊಳ್ಳು ನಗಾರಿ ಮೂಲಕ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಸಚಿವ ಭೈರತಿ ಬಸವರಾಜ್, ಜಿಟಿ ದೇವೇಗೌಡ, ಎಚ್. ವಿಶ್ವನಾಥ್, ಎಲ್. ನಾಗೇಂದ್ರ ಅವರಿಂದ ಸ್ವಾಗತ ಕೋರಲಾಯಿತು. ಇದೇ ಮೊದಲ ಬಾರಿಗೆ ದಸರಾ ಉದ್ಘಾಟಕರಿಗೆ ಮೈಸೂರು ಪ್ರವೇಶ ದ್ವಾರದ ಬಳಿ ಸ್ವಾಗತ ಕೋರಿದರು.