ಏಕಾಏಕಿ ಠಾಣೆಗೆ ಸರ್ಪ್ರೈಸ್ ವಿಸಿಟ್ ಕೊಟ್ಟ ಮೈಸೂರು ಎಸ್‌ಪಿ ಆರ್.ಚೇತನ್!
ಮೈಸೂರು / ಸರಗೂರು : ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಚೇತನ್ ಅವರು ಏಕಾಏಕಿ ಕೌಲಂದೆ ಪೊಲೀಸ್ ಠಾಣೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದರಿಂದ ಠಾಣಾ ಸಿಬ್ಬಂದಿಗಳು ಅಚ್ಚರಿಯಾಗಿದ್ದು ಎಸ್‌ಪಿ ಅವರನ್ನ ಕಂಡ ಸಿಬ್ಬಂದಿಗಳು ದಂಗಾಗಿದ್ದಾರೆ.

ಬಳಿಕ ನಂಜನಗೂಡಿನ ಹುಲ್ಲಹಳ್ಳಿ ಪೊಲೀಸ್ ಠಾಣೆಗೆ ಭೇಟಿ ಕೊಟ್ಟು ಸರಗೂರು ಠಾಣಾ ಸರಹದ್ದು ನುಗು ಅಣೆಕಟ್ಟಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಲ್ಲದೆ ಪೊಲೀಸರ ಕಾರ್ಯವೈಖರಿ ಹಾಗೂ ಬಾಕಿ ಇರುವ ಪ್ರಕರಣಗಳ ಬಗ್ಗೆಯು ಮಾಹಿತಿ ಪಡೆದಿದ್ದು, ಭದ್ರತೆ ಬಗ್ಗೆಯು ನಿಗಾ ವಹಿಸುವಂತೆ ಸೂಚನೆ ನೀಡಿದರು.