ಜಗನ್ಮಾತೆಯ ತಾಳಿ ಕದ್ದು, ತಪ್ಪು ಕಾಣಿಕೆ ಇಟ್ಟ ಖದೀಮರು.!
ನಂಜನಗೂಡು: ದೇವರ ತಾಳಿ ಕದ್ದ ಖದೀಮರು ಎರಡು ದಿನಗಳ ನಂತರ ತಪ್ಪುಕಾಣಿಕೆ ಸಮೇತ ಹಿಂದಿರುಗಿಸಿರುವ ಘಟನೆ ನಂಜನಗೂಡು ತಾಲೂಕಿನ ಉಪ್ಪಿನಹಳ್ಳಿ ಗ್ರಾಮದ ದುರ್ಗಾಂಭ ದೇವಸ್ಥಾನದಲ್ಲಿ ನಡೆದಿದೆ.

ಇದು ದೇವಿಯ ಮಹಿಮೆ ಎಂಬ ನಂಬಿಕೆ ಸ್ಥಳೀಯರಲ್ಲಿ ಬಂದಿದ್ದರು ಅವರಿಗೆ ಶಿಕ್ಷೆಯಾಗಬೇಕು ಎಂದು ದೇವರಲ್ಲಿ ಪ್ರಾರ್ಥಿಸಿದ್ದಾರೆ. ಕಳೆದ ವಾರ ಹುಂಡಿ ಲಟಾಯಿಸಲು ಬಂದ ಖದೀಮರು ದೇವರ ತಾಳಿಯನ್ನೂ ಸಹ ಲಪಟಾಯಿಸಿದ್ದಾರೆ. ಗ್ರಾಮದ ಮುಖಂಡರು ಪೊಲೀಸರಿಗೆ ದೂರು ನೀಡಿದ ನಂತರ ನಾಲ್ಕು ದಿನ ದೇವಸ್ಥಾನದ ಬಾಗಿಲು ಮುಚ್ಚಿದ್ದಾರೆ.

ಭಾನುವಾರ ಎಂದಿನಂತೆ ಬಾಗಿಲು ತೆರೆಯಲು ಬಂದ ಅರ್ಚಕರಿಗೆ ಅಚ್ಚರಿ ಕಾದಿದೆ. ಕದ್ದಿದ್ದ ತಾಳಿಯನ್ನ 100 ರೂ ನೋಟಿನಲ್ಲಿ ಕಟ್ಟಿ ದೇವಸ್ಥಾನದ ಮುಂದೆ ಇಟ್ಟು ಹೋಗಿದ್ದಾರೆ. ದೇವಿಯ ಮಹಿಮೆಯಿಂದ ಇಂತಹ ಬೆಳವಣಿಗೆ ಸಾಧ್ಯ ಅಂತಾರೆ ದೇವಾಲಯದ ಅರ್ಚಕರು. ಸದ್ಯ ನಂಜನಗೂಡು ಗ್ರಾಮಾಂತರ ಪೊಲೀಸರು ಕಳ್ಳರ ಪತ್ತೆಗೆ ಬಲೆ ಬೀಸಿದ್ದು ಪ್ರಕರಣ ದಾಖಲಾಗಿದೆ.