ಉತ್ತರ ಪ್ರದೇಶದಲ್ಲಿ ಪ್ರತಿಭಟನಾ ನಿರತ ರೈತರ ಹತ್ಯೆ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ
ಮೈಸೂರು, ಅ.4-ಉತ್ತರ ಪ್ರದೇಶದಲ್ಲಿ ಪ್ರತಿಭಟನಾ ನಿರತ ರೈತರ ಹತ್ಯೆಯನ್ನು ಖಂಡಿಸಿ ನಗರದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿತು.
ನಗರದ ಕಾಂಗ್ರೆಸ್ ಭವನದ ಮುಂಭಾಗ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಕೇಂದ್ರದ ಮಂತ್ರಿ ಅಜಯ್ ಮಿಶ್ರಾ, ಮಗ ಆಶಿಶ್ ಮಿಶ್ರಾ ಭಾವಚಿತ್ರಗಳನ್ನು ಬೆಂಕಿಯಲ್ಲಿ ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು.
ಅಲ್ಲದೆ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಡಾ. ಬಿ.ಜೆ. ವಿಜಯ್ ಕುಮಾರ್, ಕೆಪಿಸಿಸಿ ವಕ್ತಾರರಾದ ಲಕ್ಷ್ಮಣ್, ಮಂಜುಳಾ ಮಾನಸ, ವೆಂಕಟೇಶ್, ಕಾಂಗ್ರೆಸ್ ಪದಾಧಿಕಾರಿಗಳಾದ ಎನ್.ಶಿವಣ್ಣ, ಹೆಡತಲೆ ಮಂಜುನಾಥ್, ಶಿವಪ್ರಸಾದ್, ಉತ್ತನಹಳ್ಳಿ ಗಿರೀಶ್, ಶಿವಣ್ಣ, ಸಕ್ಕಳ್ಳಿ ಬಸವರಾಜ್, ಹೇಮಂತ್, ದಡದಳ್ಳಿ ಮಾದೇವ್, ಜಮೀರ್, ಮಾಧ್ಯಮ ವಕ್ತಾರರಾದ ಮಹೇಶ್, ಪುಟ್ಟಸ್ವಾಮಿ, ಪ್ರವೀಣ್ ತೇಜ, ಸಿದ್ದರಾಜು, ಜೈ ರಾಮು, ಅಪ್ಪು, ತಿಮ್ಮರಾಜು, ಪುನೀತ್, ಹುಚ್ಚಪ್ಪ, ಶ್ರೀಧರ್ ಗೌಡ ಇದ್ದರು.